ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ ನವೀಕರಣ
ಉಡುಪಿ, ಡಿ.23: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ.ಜಾತಿ/ಪ.ಪಂಗಡದ ಕುಟುಂಬದ ಸದಸ್ಯರಿಗೆ ಮುಖ್ಯ ಮಂತ್ರಿ ಆರೋಗ್ಯ ವಿಮಾ ಕಾರ್ಡ್ನ್ನು ನವೀಕರಿಸಲಾಗಿದ್ದು, ನವೀಕರಿಸಲಾದ ಕಾರ್ಡ್ನ ಕುಟುಂಬದ ಯಾವುದಾದರೂ ಸದಸ್ಯರು ಮರಣ ಹೊಂದಿದ್ದಲ್ಲಿ ನಗರಸಭಾ ಕಚೇರಿಗೆ ಮಾಹಿತಿ ನೀಡಬೇಕು ಮತ್ತು ಕಾರ್ಡ್ ಪಡೆಯದವರು ನಗರಸಭಾ ಕಚೇರಿಯ ತೆರಿಗೆ ವಸೂಲಿದಾರರನ್ನು ಅಥವಾ ನಗರಸಬೆ ಕಛೇರಿಯನ್ನು ಸಂಪರ್ಕಿಸಿ ಸಂಬಂಧಪಟ್ಟವರಿಂದ 15 ದಿನಗಳ ಒಳಗಾಗಿ ಕಾರ್ಡ್ನ್ನು ಪಡೆಯಬೇಕು.
ತಪ್ಪಿದ್ದಲ್ಲಿ ಕಾರ್ಡಿನ ವಾರಸುದಾರರು ಯಾರೂ ಇಲ್ಲವೆಂದು ಭಾವಿಸಿ ಈ ಕಾರ್ಡ್ನ್ನು ರದ್ದುಪಡಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story