ಹಣಕಾಸಿನ ತೊಂದರೆ: ಯುವಕ ಆತ್ಮಹತ್ಯೆ
ಮಣಿಪಾಲ, ಡಿ.23: ಹಣಕಾಸಿನ ತೊಂದರೆಯಿಂದ ಯುವಕರ್ನೋವ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.23ರಂದು ಬೆಳಗ್ಗೆ ಅಂಬಾಗಿಲು- ಪೆರಂಪಳ್ಳಿ ರಸ್ತೆಯ ಕಕ್ಕುಂಜೆ ಸಮೀಪದ ಹಾಡಿಯಲ್ಲಿ ನಡೆದಿದೆ.
ಮೃತರನ್ನು ಬ್ರಹ್ಮಾವರ ತಾಲೂಕು ಉಪ್ಪಿನಕೋಟೆ ನಿವಾಸಿ ಪೃಥ್ವಿ ಕೆ.ಶೆಟ್ಟಿ (28) ಎಂದು ಗುರುತಿಸಲಾಗಿದೆ. ಹಣದ ತೊಂದರೆಯಿಂದ ಅಥವಾ ಬೇರೆ ಕಾರಣ ದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಇವರು, ಮುಖ್ಯರಸ್ತೆಯಲ್ಲಿ ಬೈಕ್ ನಿಲ್ಲಿಸಿ, ಹಾಡಿಯೊಳಗೆ ಹೋಗಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪೃಥ್ವಿ ತನ್ನ ಮಾವನ ಮೊಬೈಲ್‌ಗೆ ಹಣಕಾಸಿನ ತೊಂದರೆ ಬಗ್ಗೆ ಸಂದೇಶ ಕಳುಹಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತರು ಸೊಸೈಟಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





