ಗಣರಾಜ್ಯೋತ್ಸವದಲ್ಲಿ ಬೋರಿಸ್ ಜಾನ್ಸನ್ ಪಾಲ್ಗೊಳ್ಳುವ ಸಾಧ್ಯತೆ ಇಲ್ಲ: ಡಾ.ನಾಗ್ಪಾಲ್

ಬೋರಿಸ್ ಜಾನ್ಸನ್
ಹೊಸದಿಲ್ಲಿ,ಡಿ.23: ಬ್ರಿಟನ್ನಲ್ಲಿ ರೂಪಾಂತರಿತ ಕೊರೋನ ವೈರಸ್ ವ್ಯಾಪಕ ವಾಗಿ ಹರಡುತ್ತಿರುವ ಕುರಿತ ಆತಂಕದ ಹಿನ್ನೆಲೆಯಲ್ಲಿ ಜನವರಿ 26ರಂದು ಹೊಸದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗಲಾರದು ಎಂದು ಬ್ರಿಟಿಶ್ ಮೆಡಿಕಲ್ ಅಸೋಸಿಯೇಶನ್ ಮಂಡಳಿಯ ಮುಖ್ಯಸ್ಥ ಡಾ.ಚಾಂದ್ ನಾಗ್ಪಾಲ್ ತಿಳಿಸಿದ್ದಾರೆ.
ಆದಾಗ್ಯೂ ಬೋರಿಸ್ ಜಾನ್ಸನ್ ಅವರ ಭಾರತ ಭೇಟಿಯ ಬಗ್ಗೆ ಈಗ ತಾನೇ ಏನನ್ನೂ ನಿರ್ಧರಿಸಲು ಸಾಧ್ಯವಿಲ್ಲ ಎಂದವರು ಅಭಿಪ್ರಾಯಿಸಿದ್ದಾರೆ. ಎನ್ಡಿಟಿವಿ ಸುದ್ದಿವಾಹಿನಿ ಜೊತೆ ಮಾತನಾಡಿದ ನಾಗ್ಪಾಲ್, ಬ್ರಿಟನ್ನಲ್ಲಿ ಕೊರೋನ ವೈರಸ್ನ ಸೋಂಕಿನ ಪ್ರಮಾಣ ಹಾಗೂ ಹಬ್ಬುವಿಕೆಯು ಇದೇ ರೀತಿ ಮುಂದುವರಿದಲ್ಲಿ , ಜನವರಿಯಲ್ಲಿ ಬ್ರಿಟಿಶ್ ಪ್ರಧಾನಿಯವರ ಭಾರತ ಭೇಟಿ ಸಾಧ್ಯವಾಗಲಾರದು ಎಂದರು.
‘‘ಬೋರಿಸ್ ಜಾನ್ಸನ್ ಅವರ ನಿಗದಿತ ಭಾರತ ಭೇಟಿಗೆ ಇನ್ನೂ ಐದು ವಾರಗಳು ಇರುವುದರಿಂದ ಈಗಲೇ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಕೊರೋನ ಹಾವಳಿಯ ಪರಿಸ್ಥಿತಿಯು ದಿನದಿಂದ ದಿನಕ್ಕೆ ಬದಲಾ ಗುತ್ತಲೇ ಇರುತ್ತದೆ. ಒಂದು ವೇಳೆ ಸೋಂಕಿನ ಪ್ರಮಾಣ ಹಾಗೂ ಹರಡುವಿಕೆ ಹೀಗೆಯೇ ಮುಂದುವರಿದಲ್ಲಿ ಅವರ ಭಾರತ ಭೇಟಿ ಸಾಧ್ಯವಾಗ ಲಾರದೆಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗಿದೆ ’’ ಎಂದರು. ಕೊರೋನ ವೈರಸ್ನ ಕ್ಷಿಪ್ರ ಹರಡುವಿಕೆಯಿಂದಾಗಿ ಬ್ರಿಟನ್ನಲ್ಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ನಾಗ್ಪಾಲ್ ಆತಂಕ ವ್ಯಕ್ತಪಡಿಸಿದರು.
ಬ್ರಿಟನ್ನ ಆಸ್ಪತ್ರೆಗಳಲ್ಲಿ ಶೇ.90ರಷ್ಟು ಹಾಸಿಗೆಗಳು ಕೋವಿಡ್ ರೋಗಿಗಳಿಂದ ಭರ್ತಿಯಾಗಿದ್ದು, ವೈರಸ್ನ ನಿಯಂತ್ರಣಕ್ಕೆ ಇನ್ನೂ ವಿಸ್ತೃತ ಅವಧಿಯ ಲಾಕ್ಡೌನ್ನ ಅಗತ್ಯವಿದೆ ಎಂದು ಅವರು ಹೇಳಿದರು.







