ಶಾಸಕ ಯುಟಿ. ಖಾದರ್ ಕಾರು ಹಿಂಬಾಲಿಸಿದ ಅಪರಿಚಿತರು !

ಮಂಗಳೂರು, ಡಿ.23: ಶಾಸಕ ಯು.ಟಿ. ಖಾದರ್ ಪ್ರಯಾಣಿಸುತ್ತಿದ್ದ ಕಾರಿನ ಬಳಿ ಬೈಕ್ ನಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಸಂಚರಿಸಿದ ಬಗ್ಗೆ ವರದಿಯಾಗಿದೆ.
ಕಾರನ್ನು ಹಿಂಬಾಲಿಸಿದ್ದರು ಎನ್ನಲಾದವರಿಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಘಟನೆಯು ಬುಧವಾರ ರಾತ್ರಿ 7:45ರ ಸುಮಾರಿಗೆ ನಡೆದಿದೆ. ದೇರಳಕಟ್ಟೆಯಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ದೇರಳಕಟ್ಟೆ-ನಂತೂರು ನಡುವೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
Next Story





