ಮೊದಲನೆ ಹಂತದ ಗ್ರಾ.ಪಂ. ಚುನಾವಣೆ: ಜಿಲ್ಲಾವಾರು ಮತದಾನದ ಅಂಕಿ ಅಂಶ ಪ್ರಕಟ

ಬೆಂಗಳೂರು, ಡಿ.23: ರಾಜ್ಯದ 30 ಜಿಲ್ಲೆಗಳ 3014 ಗ್ರಾಮ ಪಂಚಾಯತ್ ಗಳಿಗೆ ಡಿ.22ರಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ನಡೆದಿರುವ ಮತದಾನದ ಅಂದಾಜು ಅಂಕಿ ಅಂಶಗಳನ್ನು ರಾಜ್ಯ ಚುನಾವಣಾ ಆಯೋಗವು ಬುಧವಾರ ಪ್ರಕಟಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಎರಡು ತಾಲೂಕು 25 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.85, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎರಡು ತಾಲೂಕುಗಳ 47 ಗ್ರಾಮ ಪಂಚಾಯತ್ ಗಳಲ್ಲಿ ಶೇ.92.35, ರಾಮನಗರ ಜಿಲ್ಲೆಯ ಎರಡು ತಾಲೂಕುಗಳ 56 ಗ್ರಾಮ ಪಂಚಾಯತ್ ಗಳಲ್ಲಿ ಶೇ.89.35, ಚಿತ್ರದುರ್ಗ ಜಿಲ್ಲೆಯ ಮೂರು ತಾಲೂಕುಗಳ 100 ಗ್ರಾಮ ಪಂಚಾಯತ್ ಗಳಲ್ಲಿ ಶೇ.86.65, ದಾವಣಗೆರೆ ಜಿಲ್ಲೆಯ ಮೂರು ತಾಲೂಕುಗಳ 88 ಗ್ರಾಮ ಪಂಚಾಯತ್ ಗಳಲ್ಲಿ ಶೇ.86.09ರಷ್ಟು ಮತದಾನವಾಗಿದೆ.
ಕೋಲಾರ ಜಿಲ್ಲೆಯ ಮೂರು ತಾಲೂಕುಗಳ 85 ಗ್ರಾಮ ಪಂಚಾಯತ್ ಗಳಲ್ಲಿ ಶೇ.89.94, ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ತಾಲೂಕುಗಳ 84 ಗ್ರಾಮ ಪಂಚಾಯತ್ ಗಳಲ್ಲಿ ಶೇ.89.42, ಶಿವಮೊಗ್ಗ ಜಿಲ್ಲೆಯ ಮೂರು ತಾಲೂಕುಗಳ 113 ಗ್ರಾಮ ಪಂಚಾಯತ್ ಗಳಲ್ಲಿ ಶೇ.83.71, ತುಮಕೂರು ಜಿಲ್ಲೆಯ ಐದು ತಾಲೂಕುಗಳ 168 ಗ್ರಾಮ ಪಂಚಾಯತ್ ಗಳಲ್ಲಿ ಶೇ.88.45, ಮೈಸೂರು ಜಿಲ್ಲೆಯ ಐದು ತಾಲೂಕುಗಳ 148 ಗ್ರಾಮ ಪಂಚಾಯತ್ ಗಳಲ್ಲಿ ಶೇ.85.50, ಚಿಕ್ಕಮಗಳೂರು ಜಿಲ್ಲೆಯ ಎಂಟು ತಾಲೂಕುಗಳ 209 ಗ್ರಾಮ ಪಂಚಾಯತ್ ಗಳಲ್ಲಿ ಶೇ.81.43ರಷ್ಟು ಮತದಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ 106 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.43, ಉಡುಪಿ ಜಿಲ್ಲೆಯ ನಾಲ್ಕು ತಾಲೂಕುಗಳ 67 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.06, ಕೊಡಗು ಜಿಲ್ಲೆಯ ಎರಡು ತಾಲೂಕುಗಳ 66 ಗ್ರಾಮ ಪಂಚಾಯತ್ ಗಳಲ್ಲಿ ಶೇ.77.35, ಹಾಸನ ಜಿಲ್ಲೆಯ ನಾಲ್ಕು ತಾಲೂಕುಗಳ 125 ಗ್ರಾಮ ಪಂಚಾಯತ್ ಗಳಲ್ಲಿ ಶೇ.87.05, ಮಂಡ್ಯ ಜಿಲ್ಲೆಯ ಮೂರು ತಾಲೂಕುಗಳ 126 ಗ್ರಾಮ ಪಂಚಾಯತ್ ಗಳಲ್ಲಿ ಶೇ.86.72, ಚಾಮರಾಜನಗರ ಜಿಲ್ಲೆಯ ಎರಡು ತಾಲೂಕುಗಳ 77 ಗ್ರಾಮ ಪಂಚಾಯತ್ ಗಳಲ್ಲಿ ಶೇ.85.70ರಷ್ಟು ಮತದಾನವಾಗಿದೆ.
ಬೆಳಗಾವಿ ಜಿಲ್ಲೆಯ ಏಳು ತಾಲೂಕುಗಳ 259 ಗ್ರಾಮ ಪಂಚಾಯತ್ ಗಳಲ್ಲಿ ಶೇ.82.70, ವಿಜಯಪುರ ಜಿಲ್ಲೆಯ ಎಂಟು ತಾಲೂಕುಗಳ 111 ಗ್ರಾಮ ಪಂಚಾಯತ್ ಗಳಲ್ಲಿ ಶೇ.77.92, ಬಾಗಲಕೋಟೆ ಜಿಲ್ಲೆಯ ನಾಲ್ಕು ತಾಲೂಕುಗಳ 89 ಗ್ರಾಮ ಪಂಚಾಯತ್ ಗಳಲ್ಲಿ ಶೇ.83.36, ಧಾರವಾಡ ಜಿಲ್ಲೆಯ ಮೂರು ತಾಲೂಕುಗಳ 65 ಗ್ರಾಮ ಪಂಚಾಯತ್ ಗಳಲ್ಲಿ ಶೇ.83.13, ಗದಗ ಜಿಲ್ಲೆಯ ಮೂರು ತಾಲೂಕುಗಳ 53 ಗ್ರಾಮ ಪಂಚಾಯತ್ ಗಳಲ್ಲಿ ಶೇ.79.43, ಹಾವೇರಿ ಜಿಲ್ಲೆಯ ನಾಲ್ಕು ತಾಲೂಕುಗಳ 104 ಗ್ರಾಮ ಪಂಚಾಯತ್ ಗಳಲ್ಲಿ ಶೇ.84.00ರಷ್ಟು ಮತದಾನವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳ 101 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.78, ಕಲಬುರಗಿ ಜಿಲ್ಲೆಯ ಆರು ತಾಲೂಕುಗಳ 126 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.95, ಬೀದರ್ ಜಿಲ್ಲೆಯ ಐದು ತಾಲೂಕುಗಳ 106 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.40, ಬಳ್ಳಾರಿ ಜಿಲ್ಲೆಯ ಐದು ತಾಲೂಕುಗಳ 87 ಗ್ರಾಮ ಪಂಚಾಯತ್ ಗಳಲ್ಲಿ ಶೇ.81.24, ರಾಯಚೂರು ಜಿಲ್ಲೆಯ ನಾಲ್ಕು ತಾಲೂಕುಗಳ 91 ಗ್ರಾಮ ಪಂಚಾಯತ್ ಗಳಲ್ಲಿ ಶೇ.76.63, ಯಾದಗಿರಿ ಜಿಲ್ಲೆಯ ಮೂರು ತಾಲೂಕುಗಳ 59 ಗ್ರಾಮ ಪಂಚಾಯತ್ ಗಳಲ್ಲಿ ಶೇ.74.04 ಹಾಗೂ ಕೊಪ್ಪಳ ಜಿಲ್ಲೆಯ ಮೂರು ತಾಲೂಕುಗಳ 73 ಗ್ರಾಮ ಪಂಚಾಯತ್ ಗಳಲ್ಲಿ ಶೇ.82.27ರಷ್ಟು ಮತದಾನವಾಗಿದೆ.







