ಉಡುಪಿ: ವಿದೇಶಗಳಿಂದ ಬಂದ ಇನ್ನೂ 26 ಮಂದಿಗೆ ಕೋವಿಡ್ ಪರೀಕ್ಷೆ

ಉಡುಪಿ, ಡಿ. 23: ಬ್ರಿಟನ್ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ ಎಂಟು ಮಂದಿಗೆ ಮಂಗಳವಾರ ನಡೆಸಿದ ಕೋವಿಡ್ ಪರೀಕ್ಷೆ ನೆಗೆಟಿವ್ ಫಲಿತಾಂಶ ನೀಡಿರುವಂತೆಯೇ ಇಂದು ಮತ್ತೆ 26 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇವರ ಗಂಟಲು ದ್ರವದ ಫಲಿತಾಂಶ ನಾಳೆ ಕೈಸೇರುವ ನಿರೀಕ್ಷೆ ಇದೆ ಎಂದು ಡಿಎಚ್‌ಓ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಇಲಾಖೆಗೆ ಇತ್ತೀಚಿನ ದಿನಗಳಲ್ಲಿ ವಿದೇಶಗಳಿಂದ ಆಗಮಿಸಿದ ಇನ್ನೂ 28 ಮಂದಿಯ ಮಾಹಿತಿ ದೊರಕಿದ್ದು ಎಲ್ಲರನ್ನೂ ಇಂದು ಕೋವಿಡ್ ಪರೀಕ್ಷೆಗಾಗಿ ಕರೆಸಲಾಗಿತ್ತು. ಇವರಲ್ಲಿ 26 ಮಂದಿ ಸ್ಕ್ವಾಬ್ ಪರೀಕ್ಷೆಗೆ ಬಂದಿದ್ದು ಉಳಿದಿಬ್ಬರು ಊರಿಂದ ಹೊರಗಿರುವುದರಿಂದ ಬಂದಿಲ್ಲ ಎಂದು ಡಾ.ಸೂಡ ಹೇಳಿದರು.
ಇವರಲ್ಲಿ ಹೆಚ್ಚಿನವರು ಬ್ರಿಟನ್‌ನಿಂದ ಬಂದವರು. ಎಲ್ಲರಿಗೂ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ ಎಂದರು.
Next Story





