ಅಂಟಾರ್ಕ್ಟಿಕಕ್ಕೂ ಹರಡಿದ ಕೊರೋನ ವೈರಸ್

ಸಾಂಟಿಯಾಗೊ (ಚಿಲಿ), ಡಿ. 23: ಈವರೆಗೆ ಕೊರೋನ ವೈರಸ್‌ನಿಂದ ಮುಕ್ತವಾಗಿದ್ದ ಶೀತಲ ಅಂಟಾರ್ಕ್ಟಿಕ ಖಂಡಕ್ಕೂ ಸಾಂಕ್ರಾಮಿಕ ವೈರಸ್ ಲಗ್ಗೆಯಿಟ್ಟಿದೆ ಎಂದು ಚಿಲಿ ದೇಶದ ಸೇನೆ ಹೇಳಿದೆ.
ಇದರ ಬೆನ್ನಿಗೇ, ಪ್ರದೇಶವನ್ನು ವೈರಸ್‌ಮುಕ್ತಗೊಳಿಸಲು ಹಾಗೂ ಅಲ್ಲಿರುವ ಸಂಶೋಧನಾ ನಿಲಯದ ಸಿಬ್ಬಂದಿಯನ್ನು ಕ್ವಾರಂಟೈನ್‌ನಲ್ಲಿಡಲು ಚಿಲಿ ಸೇನೆ ಮತ್ತು ಆರೋಗ್ಯ ಇಲಾಖೆ ಯುದ್ಧೋಪಾದಿಯ ಕ್ರಮಗಳನ್ನು ತೆಗೆದುಕೊಂಡಿವೆ.
ಅಂಟಾರ್ಕ್ಟಿಕದ ಬರ್ನಾರ್ಡೊ ಒ’ಹಿಗಿನ್ಸ್ ನೆಲೆಯಲ್ಲಿರುವ ಕನಿಷ್ಠ 36 ಮಂದಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಎಂದು ಚಿಲಿಯ ಸಶಸ್ತ್ರ ಪಡೆಗಳು ಹೇಳಿಕೆಯೊಂದರಲ್ಲಿ ತಿಳಿಸಿವೆ. ಈ ಪೈಕಿ 26 ಸೇನಾ ಸಿಬ್ಬಂದಿ ಮತ್ತು 10 ಮಂದಿ ನೆಲೆಯಲ್ಲಿನ ನಿರ್ವಹಣೆಯ ಉಸ್ತುವಾರಿಯನ್ನು ಹೊತ್ತಿರುವ ನಾಗರಿಕ ಗುತ್ತಿಗೆದಾರರು.
Next Story





