ರಾಷ್ಟ್ರಪತಿ ಭವನದತ್ತ ಮೆರವಣಿಗೆ ಹೊರಟ ರಾಹುಲ್ ಗಾಂಧಿ ನೇತೃತ್ವದ ನಿಯೋಗವನ್ನು ತಡೆದ ಪೊಲೀಸರು

ಹೊಸದಿಲ್ಲಿ: ಸುಮಾರು ಒಂದು ತಿಂಗಳಿನಿಂದ ದಿಲ್ಲಿ ಗಡಿ ಭಾಗದಲ್ಲಿ ರೈತರ ಪ್ರತಿಟನೆಗೆ ಕಾರಣವಾಗಿರುವ ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ಕುರಿತು ಮಧ್ಯಪ್ರವೇಶಿಸುವಂತೆ ಕೋರಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ಗೆ 2 ಕೋಟಿ ರೈತರ ಸಹಿ ಇರುವ ಪತ್ರವನ್ನು ಹಸ್ತಾಂತರಿಸಲು ರಾಷ್ಟ್ರಪತಿ ಭವನದತ್ತ ಗುರುವಾರ ಮೆರವಣಿಗೆಯಲ್ಲಿ ತೆರಳುತ್ತಿದ್ದ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಾಯಕರುಗಳನ್ನು ಪೊಲೀಸರು ತಡೆದಿದ್ದಾರೆ.
ಕೆಲವೇ ನಾಯಕರಿಗೆ ಮಾತ್ರ ರಾಷ್ಟ್ರಪತಿ ಭೇಟಿಯಾಗಲು ಅನುಮತಿ ನೀಡಲಾಗಿದೆ.
ಕಾಂಗ್ರೆಸ್ ನಿಯೋಗಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಕಾಂಗ್ರೆಸ್‌ನ ನಾಯಕರು ಸಾಥ್ ನೀಡಿದ್ದಾರೆ.
ಅನುಮತಿ ಪಡೆದಿರುವ ನಾಯಕರಿಗೆ ಮಾತ್ರ ರಾಷ್ಟ್ರಪತಿ ಭವನಕ್ಕೆ ತೆರಳಲು ಅವಕಾಶ ನೀಡಲಾಗುವುದು ಎಂದು ಪೊಲೀಸ್ ಅಧಿಕಾರಿ ಪ್ರಗ್ಯಾ ಹೇಳಿದ್ದಾರೆ.
ದಿಲ್ಲಿಯ ಸೆಂಟ್ರಲ್ ದಿಲ್ಲಿಯ ವಿಜಯ ಚೌಕದಿಂದ ಮೆರವಣಿಗೆ ಆರಂಭಿಸುವ ಮೊದಲು ಪಕ್ಷದ ಮುಖ್ಯ ಕಚೇರಿಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರನ್ನು ರಾಹುಲ್ ಭೇಟಿ ಮಾಡಿದ್ದಾರೆ.
Next Story







