ಮಧುಗಿರಿ : ಪತ್ನಿಯನ್ನು ಕೊಲೆಗೈದು ಮನೆಯಲ್ಲೇ ಹೂತು ಹಾಕಿದ ಪತಿ !

ಮಧುಗಿರಿ : ಮದುವೆಯಾದ ಏಳು ತಿಂಗಳ ಬಳಿಕ ಪತ್ನಿಯನ್ನು ಶಂಕಿಸಿ ಹತ್ಯೆ ಮಾಡಿ, ಮನೆಯಲ್ಲೇ ಹೂತು ಹಾಕಿದ ಘಟನೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಇಟಿಗಲೋಟಿ ಗ್ರಾಮದಲ್ಲಿ ನಡೆದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಇಲ್ಲಿನ ನಿವಾಸಿ ಹನುಮಂತರಾಯಪ್ಪ ಎಂಬಾತ ಕೊಲೆ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯ ನಂತರ ಹನುಮಂತರಾಯಪ್ಪ ಮತ್ತು ಗಾಯತ್ರಿ ನಡುವೆ ಹೊಂದಾಣಿಕೆ ಇರಲಿಲ್ಲ ಎಂದು ತಿಳಿದುಬಂದಿದ್ದು, ದಂಪತಿ ನಡುವೆ ಜಗಳವಾಗಿದ್ದು, ಪತಿ ಹಾಗು ಆತನ ಇಬ್ಬರು ಸಹೋದರು ಸೇರಿ ಗಾಯತ್ರಿಯನ್ನು ಹತ್ಯೆ ಮಾಡಿರುವುದಾಗಿ ದೂರಲಾಗಿದೆ. ಹತ್ಯೆಯ ಬಳಿಕ ಮೃತದೇಹವನ್ನು ಮನೆಯ ಒಳಗೆ ಗುಂಡಿ ತೋಡಿ ಹೂತು ಹಾಕಿದ್ದು, ನಾಲ್ಕು ದಿನಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





