ಮನೆಯ ಮುಂದೆ ನಿಲ್ಲಿಸಿದ್ದ ಖಾಸಗಿ ಬಸ್ ಗೆ ಬೆಂಕಿ

ಶಿವಮೊಗ್ಗ, ಡಿ.24: ಮನೆಯ ಮುಂದೆ ನಿಲ್ಲಿಸಿದ್ದ ಖಾಸಗಿ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು ಬಸ್‌ನ ಟೈರ್ ಗಳು ಹೊರತು ಪಡಿಸಿ ಇತರೆ ಭಾಗಗಳು ಸುಟ್ಟು ಕರಕಲಾದ ಘಟನೆ ಗುರುವಾರ ನಡೆದಿದೆ.
ಶಿವಮೊಗ್ಗದ ಗುರುಪುರದ ರವಿಕುಮಾರ್ ಎಂಬವರಿಗೆ ಸೇರಿದ ಖಾಸಗಿ ಬಸ್ ಇದಾಗಿದೆ. ಕೊರೋನ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ಮನೆಯ ಎದುರಿನಲ್ಲಿಯೇ ನಿಲ್ಲಿಸಲಾಗಿತ್ತು.
ಗುರುವಾರ ಮಧ್ಯಾಹ್ನ 12-30ರ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ನ ಕೆಲ ಭಾಗಗಳು ಬೆಂಕಿಗೆ ಕರಕಲಾಗಿವೆ. ಬಸ್ ಗೆ ಬೆಂಕಿ ಹತ್ತಲು ಕಾರಣ ಇನ್ನೂ ತಿಳಿದುಬಂದಿಲ್ಲ. ತಕ್ಷವೇ ಅಗ್ನಿಶಾಮಕದಳಕ್ಕೆ ಫೋನಾಯಿಸಿದ್ದು ಅಗ್ನಿಶಾಮಕದಳದವರು ಬಂದು ಬೆಂಕಿ ಆರಿಸಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಬಸ್ ಕೋವಿಡ್ ಆರಂಭಕ್ಕೂ ಮೊದಲು ಶಿವಮೊಗ್ಗ-ಚಿತ್ರದುರ್ಗಕ್ಕೆ ಸಂಚರಿಸುತ್ತಿತ್ತು.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಪ್ರವೀಣ್ ಕುಮಾರ್, ಸಿಬ್ಬಂದಿಗಳಾದ ಸಾದಿಕ್, ಮಂಜುನಾಥ್, ಶಂಕರ್ ಹಾಗೂ ಮಂಜುನಾಥ್ ಭಾಗವಹಿಸಿದ್ದರು.
Next Story





