ಹೊಸ ಪ್ರಭೇದದ ವೈರಸ್‌ಗೂ ನಮ್ಮ ಲಸಿಕೆ ಪರಿಣಾಮಕಾರಿಯಾಗಿದೆ: ಮೋಡರ್ನಾ

ವಾಶಿಂಗ್ಟನ್, ಡಿ. 24: ತಾವು ತಯಾರಿಸಿರುವ ಕೋವಿಡ್ ಲಸಿಕೆಯು ನಿರೋಧಕ ಶಕ್ತಿಯು ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದದ ಕೊರೋನ ವೈರಸನ್ನೂ ನಿಭಾಯಿಸುವುದು ಎಂಬ ನಿರೀಕ್ಷೆಯನ್ನು ಅಮೆರಿಕದ ಔಷಧ ತಯಾರಿಕಾ ಸಂಸ್ಥೆ ಮೋಡರ್ನಾ ಇಂಕ್ ಬುಧವಾರ ವ್ಯಕ್ತಪಡಿಸಿದೆ.
ಕೊರೋನ ವೈರಸ್‌ನ ಯಾವುದೇ ಪ್ರಭೇದದ ವಿರುದ್ಧ ಲಸಿಕೆಯ ಪರಿಣಾಮವನ್ನು ಖಚಿತಪಡಿಸುವುದಕ್ಕಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಿರುವುದಾಗಿ ಕಂಪೆನಿ ತಿಳಿಸಿದೆ.
ಅತ್ಯಂತ ವೇಗವಾಗಿ ಹರಡುವ ವೈರಸ್ ಪ್ರಭೇದ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಇಂಗ್ಲೆಂಡ್‌ನ ಬಹುತೇಕ ಭಾಗಗಳಲ್ಲಿ ಕಠಿಣ ಲಾಕ್‌ಡೌನ್ ಹೇರಿಕೆಯಾದ ಬಳಿಕ ಮೋಡರ್ನಾ ಈ ಹೇಳಿಕೆ ನೀಡಿದೆ.
ಕ್ಲಿನಿಕಲ್ ಪರೀಕ್ಷೆಗಳಿಗೆ ಸಂಬಂಧಿಸಿದ ಈವರೆಗಿನ ಅಂಕಿಸಂಖ್ಯೆಗಳ ಆಧಾರದಲ್ಲಿ ಹೇಳುವುದಾದರೆ, ಕೊರೋನ ವೈರಸ್‌ನ ಯಾವುದೇ ಪ್ರಭೇದದ ವಿರುದ್ಧವೂ ಲಸಿಕೆ ಪರಿಣಾಮಕಾರಿಯಾಗಿರುತ್ತದೆ ಎಂದು ಅದು ಹೇಳಿದೆ.
ಮೋಡರ್ನಾದ ಕೊರೋನ ವೈರಸ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಇತ್ತೀಚೆಗೆ ಅನುಮೋದನೆ ನೀಡಿದೆ.
Next Story





