ವೃದ್ಧೆಯ ಮೇಲೆ ಹಲ್ಲೆ
ಕೊಲ್ಲೂರು, ಡಿ.24: ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ಗುಡ್ಕಲ್ ಸೆಳ್ಕೋಡಿನ 85 ವರ್ಷ ಪ್ರಾಯದ ವೃದ್ದೆ ಮೂಕ ಎಂಬವರ ಮೇಲೆ ನೆರೆಮನೆಯ ಚಂದ್ರ ನಾಯ್ಕ ಎಂಬವರು ಹಲ್ಲೆ ನಡೆಸಿ ಎಳೆದು ದೂಡಿದ್ದು, ತಲೆಗೆ ತೀವ್ರವಾಗಿ ಗಾಯಗೊಂಡ ಮೂಕರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಚಂದ್ರನಾಯ್ಕೆ ತನ್ನ ತಾಯಿಯ ಜೀವಕ್ಕೆ ಅಪಾಯೊಡ್ಡುವ ಉದ್ದೇಶದಿಂದಲೇ ದೂಡಿಹಾಕಿರುವುದಾಗಿ ಮೂಕ ಅವರ ಪುತ್ರ ಮಂಜು ನಾಯ್ಕ ಎಂಬವರು ಕೊಲ್ಲೂರು ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Next Story