ಹೊಸ ಪ್ರಭೇದದ ವೈರಸ್‌ನಿಂದ ಹೆಚ್ಚು ಸಾವು: ಅಧ್ಯಯನ

ಲಂಡನ್, ಡಿ. 24: ಬ್ರಿಟನ್‌ನಲ್ಲಿ ವೇಗವಾಗಿ ಹರಡುತ್ತಿರುವ ಕೊರೋನ ವೈರಸ್‌ನ ಹೊಸ ಪ್ರಭೇದವು ಹೆಚ್ಚು ಸಾಂಕ್ರಾಮಿಕ ಗುಣ ಹೊಂದಿದೆ ಹಾಗೂ ಅದರಿಂದಾಗಿ ಮುಂದಿನ ವರ್ಷ ಹೆಚ್ಚಿನ ಸಂಖ್ಯೆಯ ಜನರು ಆಸ್ಪತ್ರೆಗಳಿಗೆ ದಾಖಲಾಗಬೇಕಾಗುತ್ತದೆ ಹಾಗೂ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.
ಈ ವೈರಸ್ ಪ್ರಭೇದವು ಇತರ ಪ್ರಭೇದಗಳಿಗೆ ಹೋಲಿಸಿದರೆ 56 ಶೇಕಡ ಹೆಚ್ಚು ಸಾಂಕ್ರಾಮಿಕವಾಗಿದೆ ಎಂದು ಲಂಡನ್ ಸ್ಕೂಲ್ ಆಫ್ ಹೈಜೀನ್ ಆ್ಯಂಡ್ ಟ್ರಾಪಿಕಲ್ ಮೆಡಿಸಿನ್‌ನ ಸೆಂಟರ್ ಫಾರ್ ಮ್ಯಾತೆಮೆಟಿಕಲ್ ಮೋಡೆಲಿಂಗ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ತಿಳಿಸಿದೆ. ಆದರೆ, ಅದು ರೋಗದ ತೀವ್ರತೆಯನ್ನು ಹೆಚ್ಚಿಸುತ್ತದೆ ಅಥವಾ ತಗ್ಗಿಸುತ್ತದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆಯಿಲ್ಲ.
Next Story





