ಪುತ್ತೂರು: ಈಜುಕೊಳಕ್ಕೆ ಬಿದ್ದು ಮಗು ಮೃತ್ಯು

ಸಾಂದರ್ಭಿಕ ಚಿತ್ರ
ಪುತ್ತೂರು, ಡಿ.25: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮೂರೂವರೆ ವರ್ಷದ ಮಗು ಸ್ಥಳೀಯ ತೋಟದಲ್ಲಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಅಪಿನಿಮೂಲೆ ಎಂಬಲ್ಲಿ ನಡೆದಿದೆ.
ಅಪಿನಮೂಲೆ ನಿವಾಸಿ ಅಬೂಬಕರ್ ಸಿದ್ದೀಕ್ ಮತ್ತು ಅಸ್ಮಾ ದಂಪತಿಯ ಪುತ್ರ ಮಹಮ್ಮದ್ ಸಾನಿದ್ ಮೃತಪಟ್ಟ ಮಗು. ಗುರುವಾರ ಸಂಜೆ ಮನೆಯ ವರಾಂಡದಲ್ಲಿ ಆಟವಾಡಿಕೊಂಡಿದ್ದ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಸುತ್ತಮುತ್ತ ಹುಡುಕಾಡಿದಾಗ ನೆರೆಯ ರಾಮ್ ಕುಮಾರ್ ಎಂಬವರಿಗೆ ಸೇರಿದ ತೋಟದ ಈಜುಕೊಳದಲ್ಲಿ ಮಗು ಬಿದ್ದಿರುವುದು ಕಂಡುಬಂತೆನ್ನಲಾಗಿದೆ .ತಕ್ಷಣ ಮಗುವನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ತೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಮಗು ಕೊನೆಯುಸಿರೆಳೆದಿತ್ತು ಎನ್ನಲಾಗಿದೆ.
ಈ ಕುರಿತು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story