ಬ್ರಿಟನ್ ನಿಂದ ಚಿಕ್ಕಮಗಳೂರಿಗೆ ಮರಳಿದ ಇಬ್ಬರಲ್ಲಿ ಕೊರೋನ ಪತ್ತೆ: ಜಿಲ್ಲಾಧಿಕಾರಿ

ಚಿಕ್ಕಮಗಳೂರು, ಡಿ.25: ಬ್ರಿಟನ್ ನಿಂದ ಹಿಂದಿರುಗಿದ ಇಬ್ಬರಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಕಳೆದೊಂದು ವಾರದ ಹಿಂದೆ ಇಂಗ್ಲೆಂಡ್ ನಿಂದ 17 ಮಂದಿ ಜಿಲ್ಲೆಗೆ ಆಗಮಿದ್ದು, ಇವರ ರಕ್ತ, ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಶುಕ್ರವಾರ ಇವರ ವರದಿ ಬಂದಿದ್ದು, 17 ಮಂದಿಯ ಪೈಕಿ 2 ಮಂದಿಯಲ್ಲಿ ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಸೋಂಕಿತರನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
Next Story





