ಜೆಡಿಯು ಪಕ್ಷದ ಆರು ಶಾಸಕರು ಬಿಜೆಪಿಗೆ ಪಕ್ಷಾಂತರ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಹಿರಿಯಣ್ಣನ ಸ್ಥಾನವನ್ನು ಕಳೆದುಕೊಂಡಿರುವ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಯು) ಕಳೆದ ವರ್ಷವಷ್ಟೇ ನೆಲೆಕಂಡಿರುವ ರಾಜ್ಯವೊಂದರಲ್ಲಿ ಹಿನ್ನಡೆ ಕಂಡಿದೆ.
ಅರುಣಾಚಲಪ್ರದೇಶ ರಾಜ್ಯದ ಜೆಡಿಯುನ ಏಳು ಶಾಸಕರ ಪೈಕಿ ಆರು ಶಾಸಕರು ಬಿಜೆಪಿಗೆ ಪಕ್ಷಾಂತರವಾಗಿದ್ದಾರೆ. 60 ಸದಸ್ಯಬಲದ ಅರುಣಾಚಲಪ್ರದೇಶ ವಿಧಾನಸಭೆಯಲ್ಲಿ ಜೆಡಿಯು ಈಗ ಕೇವಲ ಒಂದು ಶಾಸಕನ ಬಲ ಹೊಂದಿದೆ.ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲದ ಶಾಸಕರು ಸೇರಿದಂತೆ ಬಿಜೆಪಿ ಬಳಿ ಈಗ 48 ಸದಸ್ಯರ ಬೆಂಬಲವಿದೆ.
ಜೆಡಿಯು ತ್ಯಜಿಸಿರುವ ಆರು ಶಾಸಕರ ಪೈಕಿ ಮೂವರಿಗೆ ಕಳೆದ ತಿಂಗಳು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಅಮಾನತುಗೊಳಿಸಿ, ನೋಟಿಸ್‌ನ್ನು ನೀಡಲಾಗಿತ್ತು.
ಬಿಜೆಪಿ ನಡವಳಿಕೆಯನ್ನು ನೋಡುತ್ತಿರುವ ನಿತೀಶ್ ಕುಮಾರ್ ಆಪ್ತರು ನಿರಾಶರಾಗಿದ್ದು, ಮುಂದಿನ ವಾರ ನಡೆಯಲಿರುವ ಜೆಡಿಯುನ ದ್ವಿದಿನ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಈವಿಚಾರದ ಕುರಿತು ಚರ್ಚಿಸಲು ನಿರ್ಧರಿಸಿದ್ದಾರೆ.
Next Story





