ಉಡುಪಿ ಜಿಲ್ಲೆಯಾದ್ಯಂತ ಸರಳ ಕ್ರಿಸ್ಮಸ್ ಹಬ್ಬದ ಆಚರಣೆ

ಉಡುಪಿ, ಡಿ. 25: ಕೊರೋನ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಕ್ರೈಸ್ತ ಬಾಂಧವರು ಇಂದು ಕ್ರಿಸ್ಮಸ್ ಹಬ್ಬವನ್ನು ಬಹಳ ಸರಳವಾಗಿ ಆಚರಿಸಿದರು.
ರಾತ್ರಿಯ ಪೂಜೆಯಲ್ಲಿ ಪಾಲ್ಗೊಳ್ಳಲು ಅನಾನುಕೂಲವಾದವರಿಗೆ ಇಂದು ಬೆಳಗ್ಗೆ ಚರ್ಚಿನಲ್ಲಿ ಹಬ್ಬದ ವಿಶೇಷ ಪೂಜೆ ನೆರವೇರಿಸಲಾಯಿತು. ಇದರಲ್ಲಿ ಕೆಲವರು ಪಾಲ್ಗೊಂಡಿದ್ದರು.
ಅವರು ತಮ್ಮ ಮನೆಗಳಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ಸೇವಿ ಸುವ ಮೂಲಕ ಹಬ್ಬವನ್ನು ಸಂಭ್ರಮಿಸಿದರು. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಬೀಚ್‌ಗಳು ಜನಜಂಗುಳಿಯಿಂದ ತುಂಬಿರುವುದು ಕಂಡುಬಂತು. ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಗೋದಲಿ ನಿರ್ಮಾಣಕ್ಕೆ ವಿಶೇಷ ಮಹತ್ವ ಇದೆ.
ಬಂಟಕಲ್ಲು ಅರಸೀಕಟ್ಟೆ ಸಮೀಪ ಮುಖ್ಯರಸ್ತೆ ಬದಿ ವೈವಿಧ್ಯತೆಗಳಿಂದ ಕೂಡಿದ ಆಕರ್ಷಕ ಗೋದಲಿ ಗಮನ ಸೆಳೆಯುತ್ತಿದೆ. ಕಳೆದ 26 ವರ್ಷಗಳಿಂದ ಗೋದಲಿ ನಿರ್ಮಾಣದಲ್ಲಿ ಸೈ ಎಣಿಸಿಕೊಂಡ, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಂತ್ರಜ್ಞ ನವೀನ್ ಕ್ವಾಡ್ರಸ್ ಇವರ ಕೈಳಕದಲ್ಲಿ ಈ ಗೋದಲಿ ಮೂಡಿಬಂದಿದೆ.
Next Story





