ಬಿಜೆಪಿ ಮೋರ್ಚಗಳಿಂದ ವಾಜಪೇಯಿ ಜನ್ಮ ದಿನಾಚರಣೆ

ಉಡುಪಿ, ಡಿ.25: ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾದ ನೇತೃತ್ವದಲ್ಲಿ ಜಿಲ್ಲೆಯ ಆರು ಮಂಡಲಗಳ ಹಿಂದುಳಿದ ವರ್ಗಗಳ ಮೋರ್ಚಾಗಳ ಸಹ ಯೋಗದೊಂದಿಗೆ ಉಡುಪಿ ಶ್ರೀಕೃಷ್ಣ ಬಾಲ ನಿಕೇತನ ಅನಾಥಶ್ರಮಕ್ಕೆ ಆಹಾರ ಸಾಮಾಗ್ರಿ ನೀಡುವ ಮೂಲಕ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಇಂದು ಸುಶಾಸನ ದಿನವಾಗಿ ಆಚರಿಸಲಾಯಿತು.
ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾ ಜಿಲ್ಲಾಧ್ಯಕ್ಷ ಸುರೇಂದ್ರ ಪಣಿ ಯೂರು, ರಾಜ್ಯ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ. ಅಣ್ಣಯ್ಯ ಕುಲಾಲ್, ಜಿಲ್ಲಾ ಉಪಾಧ್ಯಕ್ಷರಾದ ಸುಧೀರ್ ಕೆ.ಎಸ್., ಗಣೇಶ್ ಕುಮಾರ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಸತೀಶ್ ಕುಲಾಲ್ ಕಡಿಯಾಳಿ, ಕಾರ್ಯದರ್ಶಿ ರಾಕೇಶ್ ಜೋಗಿ, ಕೋಶಾಧಿಕಾರಿ ಸತೀಶ್ ಪೂಜಾರಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀಧರ ಅಮೀನ್, ಉಡುಪಿ ಮಂಡಲ ಹಿಂದುಳಿದ ವರ್ಗದ ಮೋರ್ಚಾದ ಉಪಾಧ್ಯಕ್ಷ ಸುರೇಶ ಶೇರಿಗಾರ್, ಪ್ರಧಾನ ಕಾರ್ಯ ದರ್ಶಿ ಪ್ರಸಾದ ದೇವಾಡಿಗ, ಕೋಶಾಧಿಕಾರಿ ನಾಗರಾಜ ಕರ್ಕೇರ ಮೊದ ಲಾದವರು ಉಪಸ್ಥಿತರಿದ್ದರು.
ನೀಲಾವರ ಗೋಶಾಲೆ ಸ್ವಚ್ಛ: ಜಿಲ್ಲಾ ಬಿಜೆಪಿ ಯುವ ಮೋರ್ಚಾ ವತಿಯಿಂದ ನೀಲಾವರ ಗೋಶಾಲೆಯಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಅಂಗವಾಗಿ ಮತ್ತು ಇತ್ತೀಚೆಗೆ ರಾಜ್ಯ ಸರಕಾರ ಜಾರಿಗೆ ತಂದ ಗೋಹತ್ಯೆ ನಿಷೇದ ಕಾಯ್ದೆಯನ್ನು ಸ್ವಾಗತಿಸಿ, ನೀಲಾವರ ಗೋಶಾಲೆಯನ್ನು ಸ್ವಚ್ಛಗೊಳಿಸಿ, ಗೋಪೂಜೆ ಮಾಡುವ ಮೂಲಕ ಆಚರಿಸಲಾಯಿತು.
ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ಶ್ವೇತಾ, ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಶರತ್ ಶೆಟ್ಟಿ ಉಪ್ಪುಂದ, ವಿನೋದ್ ಪೂಜಾರಿ ಶಾಂತಿನಿಕೇತನ, ಕಾರ್ಯದರ್ಶಿ ಅಭಿರಾಜ್ ಸುವರ್ಣ ಮತ್ತು ಇನ್ನಿತರ ಯುವಮೋರ್ಚಾ ಜಿಲ್ಲಾ ಮತುತಿ ಮಂಡಲ ಪಧಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.







