ಅನ್ನಭಾಗ್ಯದ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ
1.56ಲಕ್ಷ ರೂ. ಮೌಲ್ಯದ 142 ಕ್ವಿಂಟಲ್ ಅಕ್ಕಿ, ಟ್ರಕ್ ವಶ
ಕಾಪು, ಡಿ.25: ಟ್ರಕ್‌ನಲ್ಲಿ ಅಕ್ರಮವಾಗಿ ಅನ್ನಭಾಗ್ಯದ ಅಕ್ಕಿಯನ್ನು ಸಾಗಿ ಸುತ್ತಿದ್ದ ಇಬ್ಬರನ್ನು ಕಾಪು ಪೊಲೀಸರು ಡಿ.25ರಂದು ಬೆಳಗಿನ ಜಾವ 4ಗಂಟೆ ಸುಮಾರಿಗೆ ಮಣಿಪುರ ಗ್ರಾಮದ ದೆಂದೂರುಕಟ್ಟೆ ಸಮೀಪ ಬಂಧಿಸಿದ್ದಾರೆ.
ಟ್ರಕ್ ಚಾಲಕ, ವಡ್ಡರ್ಸೆ ಮಧುವನ ನಿವಾಸಿ ಮುಹಮ್ಮದ್ ಅನ್ಸಾರ್(23) ಹಾಗೂ ಮಣಿಪುರ ದೆಂದೂರುಕಟ್ಟೆ ನಿವಾಸಿ ಅಬ್ದುಲ್ ಶರೀಫ್(39) ಬಂಧಿತ ಆರೋಪಿ. ಉಡುಪಿ ತಾಲೂಕು ಪ್ರಭಾರ ಆಹಾರ ನಿರೀಕ್ಷಕಿ ಮೌನ ಕೆ. ನೀಡಿದ ಮಾಹಿತಿಯಂತೆ ಕಾಪು ಪೊಲೀಸರು ಈ ಕಾರ್ಯಾ ಚರಣೆ ನಡೆಸಿದ್ದಾರೆ.
ಆರೋಪಿಗಳು ಸರಕಾರದಿಂದ ಜನರಿಗೆ ದೊರೆಯುವ ಉಚಿತ ಅನ್ನಭಾಗ್ಯದ ಅಕ್ಕಿಯನ್ನು ಮನೆ ಮನೆಗೆ ಹೋಗಿ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದರು. 284 ಚೀಲಗಳಲ್ಲಿದ್ದ 1,56,200ರೂ. ಮೌಲ್ಯದ ಒಟ್ಟು 142 ಕ್ವಿಂಟಲ್ ಅಕ್ಕಿ, 10ಲಕ್ಷ ರೂ. ಮೌಲ್ಯದ ಟ್ರಕ್, ಒಟ್ಟು 5ಸಾವಿರ ರೂ. ಮೌಲ್ಯದ ವೇಯಿಂಗ್ ಮಿಷೆನ್ ಮತ್ತು ಬ್ಯಾಗ್ ಕ್ಲೋಷರ್ ಮೆಷಿನ್‌ಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





