ಅಕ್ರಮ ಸಾಗಾಟ ಆರೋಪ : 14 ಜಾನುವಾರು ವಶ
ಬೈಂದೂರು, ಡಿ.25: ಇನ್ಸುಲೆಟರ್ ವಾಹನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ 14 ಜಾನುವಾರುಗಳನ್ನು ಬೈಂದೂರು ಪೊಲೀಸರು ಭಟ್ಕಳ ತಾಲೂಕಿನ ಬೆಳಕೆಯಲ್ಲಿ ಡಿ.24ರಂದು ರಾತ್ರಿ ವೇಳೆ ವಶಪಡಿಸಿಕೊಂಡಿದ್ದಾರೆ.
ನಾವುಂದ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಈ ವಾಹನವನ್ನು ಬೆನ್ನಟ್ಟಿ ಅದರಲ್ಲಿದ್ದ ಒಟ್ಟು 12 ದೊಡ್ಡ ದನಗಳು ಹಾಗೂ 2 ಚಿಕ್ಕ ಗಂಡು ಕರು ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಕತ್ತಲಲ್ಲಿ ಓಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





