15 ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ

ಬೆಂಗಳೂರು, ಡಿ.25: ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹದಿನೈದು ಮಂದಿ ಸಿವಿಲ್ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಇದೇ ವೇಳೆ ಹೊಸದಾಗಿ ನೇಮಕಗೊಂಡಿರುವ 11 ಮಂದಿ ಸಿವಿಲ್ ನ್ಯಾಯಾಧೀಶರಿಗೆ ಸ್ಥಳ ನಿಯೋಜಿಸಿ ಅಧಿಸೂಚನೆ ಹೊರಡಿಸಿದೆ.
ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬಾದಾಮಿಕರ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಈ ವರ್ಗಾವಣೆ ಹಾಗೂ ಸ್ಥಳ ನಿಯೋಜನೆ ಆದೇಶವು 2021ರ ಜ.4ರಿಂದ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ನೂತನ ಸಿವಿಲ್ ನ್ಯಾಯಾಧೀಶರು: ಸುಮನ್ ಚಿತ್ತರಗಿ, ಎಂ.ಹರೀಶ್ ಕುಮಾರ್, ಮಾಯಪ್ಪ ಲಗಮಪ್ಪ ಪೂಜಾರಿ, ರವೀಂದ್ರ ಎಸ್ ಹಾವರಗಿ, ಟಿ.ಸಿ.ಸುಷ್ಮಾ, ಪಿ.ಎ.ಪವಾಜ್, ಅರ್ಸಿನಾ, ಎ.ಕಾಜಲ್, ಆರ್.ಚಂಪಾಶ್ರೀ, ಎಂ.ಎಸ್.ಸುನಿಲ್ ಕುಮಾರ್, ರೂಪ ಚೆನ್ನಮಲ್ಲಪ್ಪ ವಗ್ಗ ಅವರನ್ನು ರಾಜ್ಯದ ವಿವಿಧ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಗಳಲ್ಲಿ ನಿಯೋಜಿಸಲಾಗಿದೆ.
ವರ್ಗಾವಣೆಗೊಂಡಿರುವ ನ್ಯಾಯಾಧೀಶರು: ಜೆ.ಪೂಜಾ, ಬಿ.ಸಿ.ಅರವಿದ್ರ, ಎಚ್.ವಿ. ಶ್ರೀಶೈಲಜಾ, ಎಂ.ವಿನೋದ್ ಕುಮಾರ್, ವಿಶ್ವನಾಥ ಯಮಕನಮರಡಿ, ಲಕ್ಷ್ಮೀಬಾಯಿ, ಎಚ್.ಎಸ್.ಪೂಜಶ್ರೀ, ಕೆ ಪ್ರೀತಿ, ಎ.ಎಂ.ಸರಿತಾ ಕುಮಾರಿ, ಸಂಜೀವ್ ಕುಮಾರ್ ಎಸ್ .ಹಿಂದೊಡ್ಡಿ, ಕೆ ಶರ್ಮಿಳಾ ಕಾಮತ್, ಎಚ್.ಸಿ.ರೇಖಾ, ಯೋಗೇಶ್ವರಿ, ತ್ರಿವೇಣಿ ಇರಾಗರ್, ವಿಸ್ಮಿತಾ ಮೂರ್ತಿ ಅವರನ್ನು ವಿವಿಧ ನ್ಯಾಯಾಲಯಗಳಿಗೆ ವರ್ಗಾವಣೆ ಮಾಡಲಾಗಿದೆ.







