ನೈಜೀರಿಯದಲ್ಲಿ ಕೊರೋನದ 3ನೇ ರೂಪಾಂತರಿತ ಪ್ರಭೇದ ಪತ್ತೆ

ಅಬುಜ (ನೈಜೀರಿಯ), ಡಿ. 25: ಕೊರೋನ ವೈರಸ್‌ನ ಇನ್ನೊಂದು ರೂಪಾಂತರಿತ ಪ್ರಭೇದ ನೈಜೀರಿಯದಲ್ಲಿ ಪತ್ತೆಯಾಗಿದೆ ಎಂದು ಆಫ್ರಿಕಾದ ರೋಗ ನಿಯಂತ್ರಣ ಸಂಸ್ಥೆಯ ಮುಖ್ಯಸ್ಥರು ಎಚ್ಚರಿಸಿದ್ದಾರೆ ಹಾಗೂ ಈ ನಿಟ್ಟಿನಲ್ಲಿ ಹೆಚ್ಚಿನ ಪರೀಕ್ಷೆಯ ಅಗತ್ಯವಿದೆ ಎಂದು ಹೇಳಿದ್ದಾರೆ.
ಬ್ರಿಟನ್ ಮತ್ತು ದಕ್ಷಿಣ ಆಫ್ರಿಕದಲ್ಲಿ ಹೆಚ್ಚು ವೇಗವಾಗಿ ಹರಡುವ ರೂಪಾಂತರಿತ ಕೊರೋನ ವೈರಸ್ ಪ್ರಭೇದಗಳು ಪತ್ತೆಯಾದ ಬಳಿಕ, ಇದೀಗ ಮೂರನೇ ಪ್ರಭೇದ ಪತ್ತೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.
ನೈಜೀರಿಯ ರೋಗ ನಿಯಂತ್ರಣ ಕೇಂದ್ರ ಮತ್ತು ನೈಜೀರಿಯದಲ್ಲಿರುವ ಆಫ್ರಿಕನ್ ಸೆಂಟರ್ ಫಾರ್ ಜಿನೋಮಿಕ್ಸ್ ಆಫ್ ಇನ್‌ಫೆಕ್ಶಿಯಸ್ ಡಿಸೀಸಸ್ ಸಂಸ್ಥೆಗಳು ಸೋಂಕು ಪ್ರಕರಣಗಳ ಹೆಚ್ಚು ಮಾದರಿಗಳನ್ನು ವಿಶ್ಲೇಷಣೆ ನಡೆಸಲಿವೆ ಎಂದು ಎರಡನೇ ಸಂಸ್ಥೆಯ ಮುಖ್ಯಸ್ಥ ನಿಕೆಂಗಸೊಂಗ್ ಹೇಳಿದರು.
ಎರಡು ಅಥವಾ ಮೂರು ಜನೆಟಿಕ್ ಸೀಕ್ವೆನ್ಸ್‌ಗಳ ಆಧಾರದಲ್ಲಿ ಹೊಸ ಪ್ರಭೇದವೊಂದರ ಉಗಮವಾಗಿರಬಹುದು ಎಂಬ ನಿರ್ಧಾರಕ್ಕೆ ಬರಲಾಗಿದೆ.
Next Story





