ಸಚಿವ ರವಿಶಂಕರ್ ಪ್ರಸಾದ್ ತಾಯಿ ನಿಧನ
ಪಾಟ್ನ, ಡಿ.25: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ರ ತಾಯಿ ಬಿಮಲಾ ಪ್ರಸಾದ್ ದೀರ್ಘಾವಧಿಯ ಅಸ್ವಸ್ಥತೆಯ ಬಳಿಕ ಗುರುವಾರ ರಾತ್ರಿ ನಿಧನರಾಗಿದ್ದಾರೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.
ತಾಯಿ ನಿಧನರಾಗಿರುವ ಮಾಹಿತಿಯನ್ನು ರವಿಶಂಕರ್ ಪ್ರಸಾದ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಪಕ್ಷದ ಆರಂಭದ ದಿನಗಳಿಂದಲೂ ಬಿಜೆಪಿಯ ಬೆಂಬಲಿಗರಾಗಿದ್ದ ಬಿಮಲಾ ಪ್ರಸಾದ್, ಬಿಹಾರದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಅಭಿಯಾನದಲ್ಲಿ ಮಹಿಳಾ ಕಾರ್ಯಕರ್ತೆಯಾಗಿ ಸಕ್ರಿಯ ಕಾರ್ಯ ನಿರ್ವಹಿಸಿದ್ದರು. ಬಿಜೆಪಿಯ ಮುಖಂಡರಾದ ವಾಜಪೇಯಿ, ದೀನದಯಾಳ್, ನಾನಾಜಿ ದೇಶ್ಮುಖ್ ಮತ್ತಿತರರು ಪಾಟ್ನಾಕ್ಕೆ ಭೇಟಿ ನೀಡಿದಾಗ ನಮ್ಮ ಮನೆಗೆ ಬಂದು ತಾಯಿಯ ಆತಿಥ್ಯ ಸವಿಯುತ್ತಿದ್ದರು ಎಂದು ಪ್ರಸಾದ್ ಸ್ಮರಿಸಿಕೊಂಡಿದ್ದಾರೆ.
ಬಿಮಲಾ ಪ್ರಸಾದ್ ನಿಧನಕ್ಕೆ ಬಿಹಾರ ರಾಜ್ಯಪಾಲ ಫಗು ಚೌಹಾಣ್, ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಇತರ ಮುಖಂಡರು ಸಂತಾಪ ಸೂಚಿಸಿದ್ದಾರೆ.
Next Story