ಬಾಕ್ಸಿಂಗ್ ಡೇ ಟೆಸ್ಟ್ : ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸೀಸ್
ಮೆಲ್ಬೋರ್ನ್ : ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ಆಸ್ಟ್ರೇಲಿಯಾ ತಂಡ ಆರ್.ಅಶ್ವಿನ್ ಅವರ ಸ್ಪಿನ್ ಮೋಡಿಗೆ ಸಿಲುಕಿ ಆರಂಭಿಕ ಆಘಾತ ಅನುಭವಿಸಿದೆ. ಆದರೆ ಮರ್ನಸ್ ಲಬುಶೆನ್ ಮತ್ತು ಟ್ರಾವಿಸ್ ಹೆಡ್ ಪ್ರತಿಹೋರಾಟದಿಂದ ಚೇತರಿಕೆ ಹಾದಿಯಲ್ಲಿದೆ. ಮ್ಯಾಥ್ಯೂ ವೇಡ್ (30), ಜೋಯ್ ಬರ್ನ್ಸ್ (0) ಮತ್ತು ಸ್ಟೀವ್ ಸ್ಮಿತ್ (0) ಅವರ ವಿಕೆಟ್ ಕಳೆದುಕೊಂಡ ಅತಿಥೇಯ ತಂಡ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿತ್ತು.
ಆತ್ಮವಿಶ್ವಾಸದಿಂದ ಆಡುತ್ತಿದ್ದ ವೇಡ್ 39 ಎಸೆತಗಳಲ್ಲಿ 30 ರನ್ ಗಳಿಸಿದ್ದಾಗ ಅಶ್ವಿನ್ ಎಸೆತದಲ್ಲಿ ರವೀಂದ್ರ ಜಡೇಜಾ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಅಶ್ವಿನ್ ಅವರ ಎಸೆತದಲ್ಲಿ ಚೇತೇಶ್ವರ ಪೂಜಾರ ಹಿಡಿದ ಕ್ಯಾಚ್ನಿಂದ ಸ್ಟೀವ್ ಸ್ಮಿತ್ ಶೂನ್ಯಕ್ಕೆ ಪೆವಿನಿಯಲ್ಗೆ ಮರಳಿದರು.
ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ 60 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದೆ. ಕ್ಯಾಮರೊನ್ ಗ್ರೀನ್ (12) ಮತ್ತು ಟೈಮ್ ಪೈನ್ (13) ಕ್ರೀಸ್ನಲ್ಲಿದ್ದಾರೆ.