ತೊಕ್ಕೊಟ್ಟು : ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ; ಯುವಕ ಸ್ಥಳದಲ್ಲೇ ಮೃತ್ಯು

ಉಳ್ಳಾಲ : ಬೈಕ್ ಮತ್ತು ಆ್ಯಕ್ಟಿವಾ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಕೆರೆಬೈಲಿನ ಕೊರಗಜ್ಜನ ಕಟ್ಟೆ ಸಮೀಪ ಶನಿವಾರ ನಡೆದಿದೆ.
ಸಂತೋಷ್ ನಗರ ನಿವಾಸಿ ಸಂದೇಶ್ ಪೂಜಾರಿ (31) ಮೃತರು ಎಂದು ಗುರುತಿಸಲಾಗಿದೆ.
ಕಣೀರ್ ತೋಟದ ಜಾತ್ರೆ ನೋಡಲು ತೆರಳಿದ್ದ ಸಂದೇಶ್ ಬೈಕ್ ನಲ್ಲಿ ಮನೆಗೆ ವಾಪಸಾಗುತ್ತಿದ್ದ ವೇಳೆ ಕೆರೆಬೈಲಿನ ಕೊರಗಜ್ಜನ ಕಟ್ಟೆಯ ಬಳಿ ಆಕ್ಟಿವಾಕ್ಕೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಇದರಿಂದ ಸಂದೇಶ್ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆ್ಯಕ್ಟಿವಾ ಸವಾರನೂ ಗಾಯಗೊಂಡಿದ್ದಾರೆ.
ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





