ಆನೆ ದಂತ ಮಾರಾಟಕ್ಕೆ ಯತ್ನ: ಮೂವರ ಬಂಧನ

ಮಡಿಕೇರಿ: ಶಿಲ್ಪಕಲೆಯಂತೆ ಕೆತ್ತನೆ ಹೊಂದಿರುವ ಮೂರು ಆನೆ ದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಮೈಸೂರು ಅರಣ್ಯ ಸಂಚಾರಿ ದಳದ ಅಧಿಕಾರಿಗಳು ದಾಳಿ ನಡೆಸಿ, ಕೊಡಗಿನ ಸೋಮವಾರಪೇಟೆಯ ಇಬ್ಬರು, ಮೈಸೂರಿನ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಪಟ್ಟಣದ ಆಲೇಕಟ್ಟೆ ರಸ್ತೆ ನಿವಾಸಿ ಮುರುಳಿ (55) ಹಾಗೂ ವೆಂಕಟೇಶ್ವರ ಬ್ಲಾಕ್‍ನ ಸುಮಂತ್ (26), ಮೈಸೂರು ನಾಯ್ಡು ನಗರದ ಮನೋಹರ್ (40) ಎಂಬವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





