ಅಂತಾರಾಷ್ಟ್ರೀಯ ಮಟ್ಟದ ಆನ್‌ಲೈನ್ ಗಾಯನ ಸ್ಪರ್ಧೆ: ಡಾ.ಸಿಲ್ವಿನಿಯಾ, ಡಾ.ಶಾಲಿನಿಗೆ ಬಹುಮಾನ
ಉಡುಪಿ, ಡಿ.26: ಉತ್ತರಖಂಡ್ ಡೆಹ್ರಾಡೂನ್ ಆಯುಷ್ ದರ್ಪಣ್ ಫೌಂಡೇಶನ್‌ನ ಆರನೆ ವಾರ್ಷಿಕೋತ್ಸವದ ಪ್ರಯುಕ್ತ ಇತ್ತೀಚೆಗೆ ನಡೆಸಿದ ಅಂತಾ ರಾಷ್ಟ್ರೀಯ ಮಟ್ಟದ ಆನ್‌ಲೈನ್ ಗಾಯನ ಸ್ಪರ್ಧೆಯಲ್ಲಿ ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ಪದವಿ ರೋಗ ನಿದಾನ ವಿಭಾಗದ ವಿದ್ಯಾರ್ಥಿನಿ ಡಾ.ಸಿಲ್ವಿನಿಯಾ ಎ.ಫೆರ್ನಾಂಡಿಸ್ ಪ್ರಥಮ ಸ್ಥಾನ ಹಾಗೂ ಪೋಸ್ಟರ್ ಸ್ಪರ್ಧೆಯಲ್ಲಿ ಸ್ನಾತಕೋತ್ತರ ಪದವಿ ರಸಶಾಸ್ತ್ರ ಮತ್ತು ಭೈಷಜ್ಯ ಕಲ್ಪನ ವಿಭಾಗದ ವಿದ್ಯಾರ್ಥಿನಿ ಡಾ.ಶಾಲಿನಿ ಪ್ರಥಮ ಸ್ಥಾನ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
Next Story