ಕೊಂಕಣ ರೈಲು ಮಾರ್ಗದಲ್ಲಿ ಎರಡು ಸಾಪ್ತಾಹಿಕ ವಿಶೇಷ ರೈಲು
ಉಡುಪಿ, ಡಿ.26: ಕೊಂಕಣ ರೈಲು ಮಾರ್ಗದಲ್ಲಿ ಕೊಯಮತ್ತೂರು ಹಾಗೂ ಹಿಸ್ಸಾರ್ ಜಂಕ್ಷನ್ ಮತ್ತು ಎರ್ನಾಕುಲಂ ಜಂಕ್ಷನ್ ಹಾಗೂ ಅಜ್ಮೀರ್ ನಡುವೆ ಎರಡು ಸಾಪ್ತಾಹಿಕ ವಿಶೇಷ ಎಸಿ ಸೂಪರ್‌ಫಾಸ್ಟ್ ರೈಲುಗಳು ಕ್ರಮವಾಗಿ ಜ.30 ಮತ್ತು ಜ.31ರವರೆಗೆ ಓಡಾಟ ನಡೆಸಲಿವೆ.
ರೈಲು ನಂ.02475 ಹಿಸ್ಸಾರ್ ಜಂಕ್ಷನ್-ಕೊಯಮತ್ತೂರು ಎಸಿ ಸೂಪರ್‌ಫಾಸ್ಟರ್ ಸಾಪ್ತಾಹಿಕ ರೈಲು ಜ.27ರವರೆಗೆ ಪ್ರತಿ ಬುಧವಾರ ಅಪರಾಹ್ನ 12:50ಕ್ಕೆ ಹಿಸ್ಸಾರ್ ಜಂಕ್ಷನ್‌ನಿಂದ ಹೊರಡಲಿದ್ದು, ಮೂರನೇ ದಿನ ಅಪರಾಹ್ನ 2:40ಕ್ಕೆ ಕೊಯಮತ್ತೂರನ್ನು ತಲುಪಲಿದೆ. ಅದೇ ರೀತಿ ರೈಲು ನಂ.02476 ಕೊಯಮತ್ತೂರು-ಹಿಸ್ಸಾರ್ ಜಂಕ್ಷನ್ ಎಸಿ ಸೂಪರ್‌ಫಾಸ್ಟ್ ರೈಲು ಡಿ.26ರಿಂದ 2021ರ ಜ.30ರವರೆಗೆ ಪ್ರತಿ ಶನಿವಾರ ಅಪರಾಹ್ನ 3 ಕ್ಕೆ ಕೊಯಮತ್ತೂರಿ ನಿಂದ ಹೊರಡಲಿದ್ದು, ಮೂರನೇ ದಿನ ಸಂಜೆ 4 ಗಂಟೆಗೆ ಹಿಸ್ಸಾರ್ ತಲುಪಲಿದೆ.
ಈ ರೈಲಿಗೆ ಕರ್ನಾಟಕ ಕರಾವಳಿಯ ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್‌ಗಳಲ್ಲದೇ ಮಡಗಾಂವ್ ಜಂಕ್ಷನ್, ರತ್ನಗಿರಿ, ಕಣ್ಣೂರುಗಳಲ್ಲಿ ನಿಲುಗಡೆ ಇರುತ್ತದೆ. ರೈಲು ಒಟ್ಟು 18 ಕೋಚ್‌ಗಳನ್ನು ಹೊಂದಿರುತ್ತದೆ. ಫಸ್ಟ್ ಎಸಿ- 1ಕೋಚ್, 2ಟಯರ್ ಎಸಿ-4ಕೋಚ್, 3ಟಯರ್‌ಎಸಿ-10 ಕೋಚ್, ಪ್ಯಾಂಟ್ರಿ ಕಾರ್-1, ಜನರೇಟರ್ ಕಾರ್-2 ಹೊಂದಿರಲಿದೆ.
ಅಜ್ಮೀರ್-ಎರ್ನಾಕುಲಂ: ರೈಲು ನಂ.02978 ಅಜ್ಮೀರ್-ಎರ್ನಾಕುಲಂ ಜಂಕ್ಷನ್ ಸೂಪರ್‌ಫಾಸ್ಟ್ ವಿಶೇಷ ಸಾಪ್ತಾಹಿಕ ರೈಲು ಡಿ.25ರಿಂದ 2021ರ ಜ.29ರವರೆಗೆ ಪ್ರತಿ ಶುಕ್ರವಾರ ಬೆಳಗ್ಗೆ 9:00ಕ್ಕೆ ಅಜ್ಮೀರ್‌ನಿಂದ ಹೊರಟು ಮೂರನೇ ದಿನ ಮುಂಜಾನೆ 4:25ಕ್ಕೆ ಎರ್ನಾಕುಲಂ ಜಂಕ್ಷನ್ ಮುಟ್ಟುತ್ತದೆ. ಅದೇ ರೀತಿ ರೈಲು ನಂ.02977 ಎರ್ನಾಕುಲಂ ಜಂಕ್ಷನ್-ಅಜ್ಮೀರ್ ಸೂಪರ್‌ಪಾಸ್ಟ್ ಸಾಪ್ತಾಹಿಕ ರೈಲು ಡಿ.27ರಿಂದ ಜ.31ರವರೆಗೆ ಪ್ರತಿ ರವಿವಾರ ಎರ್ನಾಕುಲಂನಿಂದ ರಾತ್ರಿ 8:25ಕ್ಕೆ ಹೊರಟು ಮೂರನೇ ದಿನ ಸಂಜೆ 4:35ಕ್ಕೆ ಅಜ್ಮೀರ್ ತಲುಪಲಿದೆ.
ಈ ರೈಲಿನ ಕರ್ನಾಟಕದಲ್ಲಿ ಕಾರವಾರ, ಗೋಕರ್ಣ ರೋಡ್, ಭಟ್ಕಳ್, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪು, ಉಡುಪಿ, ಮಂಗಳೂರು ಜಂಕ್ಷನ್ ಅಲ್ಲದೇ ಕಾಸರಗೋಡು, ಕಣ್ಣೂರು, ರತ್ನಗಿರಿ, ತೀವಂ, ಮಡಗಾಂವ್ ಜಂಕ್ಷನ್‌ಗಳಲ್ಲಿ ನಿಲುಗಡೆ ಇರುತ್ತದೆ.
ಈ ರೈಲು ಒಟ್ಟು 22 ಕೋಚ್‌ಗಳನ್ನು ಹೊಂದಿರುತ್ತದೆ. ಫಸ್ಟ್‌ಕ್ಲಾಸ್-2 ಟಯರ್ ಎಸಿ 1ಕೋಚ್, 2ಟಯರ್ ಎಸಿ-2ಕೋಚ್, 3ಟಯರ್ ಎಸಿ- 6 ಕೋಚ್, ಸ್ಲೀಪರ್-6 ಕೋಚ್, ಸೆಕೆಂಡ್ ಸೀಟಿಂಗ್-4ಕೋಚ್, ಪ್ಯಾಂಟ್ರಿ ಕಾರ್-1, ಜನರೇಟರ್ ಕಾರ್-2ಕೋಚ್‌ಗಳಿರುತ್ತದೆ. ಕೇಂದ್ರ ಸರಕಾ ರದ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಈ ರೈಲು ಓಡಾಟ ನಡೆಸಲಿದೆ ಎಂದು ಕೊಂಕಣ ರೈಲ್ವೆಯ ಸಾರ್ವಜನಿಕ ಸಂರ್ಕ ಅಧಿಕಾರಿಗಳ ಪ್ರಕಟನೆ ತಿಳಿಸಿದೆ.







