ಬೈಕ್ ಢಿಕ್ಕಿ: ರಸ್ತೆ ಬದಿ ನಿಂತಿದ್ದ ಲಾರಿ ನಿರ್ವಾಹಕ ಮೃತ್ಯು
ಕಾಪು, ಡಿ.26: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಊಳಿಯಾರಗೊಳಿ ಗ್ರಾಮದ ದಂಡತೀರ್ಥ ಶಾಲೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಡಿ.26ರಂದು ನಸುಕಿನ ವೇಳೆ ನಡೆದಿದೆ.
ಮೃತರನ್ನು ನಿಸಾದ್ ಎಂದು ಗುರುತಿಸಲಾಗಿದೆ. ಇವರು ಸ್ಮಿಜೀತ್ ಎಂಬವರೊಂದಿಗೆ ಇನ್ಸುಲೇಟರ್ ಲಾರಿಯಲ್ಲಿ ಮುಂಬೈಯಿಂದ ಮೀನನ್ನು ಲೋಡ್ ಮಾಡಿಕೊಂಡು ಕೇರಳ ರಾಜ್ಯಕ್ಕೆ ಹೊಗುತ್ತಿದ್ದು, ಆಗ ಲಾರಿಯ ಹಿಂಬದಿ ಎ ಟಯರ್ ಪಂಚರ್ ಆಗಿತ್ತೆನ್ನಲಾಗಿದೆ.
ಅದಕ್ಕೆ ಲಾರಿಯನ್ನು ನಿಲ್ಲಿಸಿ ಸ್ಮಿಜೀತ್ ಲಾರಿಯ ಕೆಳಗೆ ಹೋಗಿ ಜಾಕ್ ಹಾಕು ತ್ತಿದ್ದು, ನಿಸಾದ್ ಮೊಬೈಲ್‌ನಿಂದ ಲೈಟ್ ತೋರಿಸುತ್ತಿದ್ದರು. ಈ ವೇಳೆ ಪ್ರಜ್ವಲ್ ಎಂಬವರ ಚಲಾಯಿಸಿಕೊಂಡು ಬಂದ ಬೈಕ್ ನಿಸಾದ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ಗಂಭೀಗವಾಗಿ ಗಾಯಗೊಂಡ ನಿಸಾದ್ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು. ಅಪಘಾತ ದಿಂದ ಬೈಕ್ ಸವಾರ ಪ್ರಜ್ವಲ್ ಗಾಯಗೊಂಡು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





