ಛಾಯಾಗ್ರಾಹಕ ಫೋಕಸ್ ರಾಘುಗೆ ಅಂತಾರಾಷ್ಟ್ರೀಯ ಗೌರವ

ಉಡುಪಿ, ಡಿ.26: ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗ ಸಂಸ್ಥೆಯನ್ನು ಹೊಂದಿರುವ ಯುನೆಸ್ಕೊ ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆಯಾದ ಫೆಡರೇಶನ್ ಇಂಟರ್‌ನ್ಯಾಶನಲ್ ಡೆ ಆರ್ಟ್ ಫೋಟೋಗ್ರಫಿಕ್(ಎಫ್‌ಐಎಪಿ) ವತಿಯಿಂದ ಉಡುಪಿಯ ಖ್ಯಾತ ಛಾಯಾ ಗ್ರಾಹಕ ಫೋಕಸ್ ರಾಘು ಅವರಿಗೆ ಇಎಫ್‌ಐಎಪಿ ಡಿಸ್ಟಿಂಕ್ಷನ್ ಅಂತಾ ರಾಷ್ಟ್ರೀಯ ಗೌರವ ಲಭಿಸಿದೆ.
ಈ ಗೌರವ ಲಭಿಸಲು 20ಕ್ಕೂ ಅಧಿಕ ದೇಶಗಳಲ್ಲಿ ಚಿತ್ರಗಳು ಪ್ರದರ್ಶನ ಗೊಂಡಿರಬೇಕು. ಕನಿಷ್ಠ ಹೊರಗಿನ 2 ದೇಶಗಳಲ್ಲಾದರೂ ಪ್ರಶಸ್ತಿ ಬಂದಿರಬೇಕು ಮತ್ತು ಕನಿಷ್ಠ 250 ಚಿತ್ರಗಳು ಆಯ್ಕೆಗೊಂಡಿರಬೇಕು. ರಾಘು ಅವರು 25ಕ್ಕೂ ಅಧಿಕ ಅಂತರರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.
ಕರಾವಳಿ ಭಾಗದಲ್ಲಿ ಈ ಗೌರವ ಪಡೆದ ಮೊದಲಿಗರಾಗಿರುವ ರಾಘು ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಅವರ ಶಿಷ್ಯ ಎಂದು ಪ್ರಕಟಣೆ ತಿಳಿಸಿದೆ.
Next Story





