ಡಿ.31ಕ್ಕೆ ಸಿಬಿಎಸ್ಇ ಪರೀಕ್ಷೆಯ ವೇಳಾಪಟ್ಟಿ ಪ್ರಕಟ: ಸಚಿವ ರಮೇಶ್ ಪೋಖ್ರಿಯಾಲ್

ಹೊಸದಿಲ್ಲಿ: ಸಿಬಿಎಸ್ ಇ ಬೋರ್ಡ್ ಪರೀಕ್ಷೆಯ ವೇಳಾಪಟ್ಟಿಯನ್ನು ಡಿ.31ರಂದು ಸಂಜೆ ಆರು ಗಂಟೆಗೆ ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಶನಿವಾರ ರಾತ್ರಿ ಟ್ವೀಟ್ ಮಾಡಿದ್ದಾರೆ.
2021ನೇ ಸಾಲಿನಲ್ಲಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವಾಗದಿಂದ ಪರೀಕ್ಷೆ ಆರಂಭಿಸಲಾಗುವುದು ಎನ್ನುವುದನ್ನು ಡಿ.31ರಂದು ಘೋಷಿಸಲಿದ್ದೇವೆ ಎಂದು ಅವರು ಟ್ವೀಟಿಸಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಮುಂದಿನ ವರ್ಷದ ಫೆಬ್ರವರಿ ತನಕ ಸಿಬಿಎಸ್ ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಮಂಗಳವಾರ ಪೋಖ್ರಿಯಾಲ್ ತಿಳಿಸಿದ್ದರು.
Next Story





