ಫ್ರಾನ್ಸ್‌ನಲ್ಲೂ ರೂಪಾಂತರಿತ ಕೊರೋನ ಪತ್ತೆ

ಪ್ಯಾರಿಸ್,ಡಿ.26: ಬ್ರಿಟನ್‌ನಲ್ಲಿ ವ್ಯಾಪಕವಾಗಿ ಹಾವಳಿಯೆಬ್ಬಿಸಿರುವ ರೂಪಾಂತರಿತ ಕೊರೋನ ವೈರಸ್‌ನ ಪ್ರಭೇದವು ಫ್ರಾನ್ಸ್‌ನಲ್ಲಿಯೂ ಪತ್ತೆಯಾಗಿರುವುದನ್ನು ಫ್ರೆಂಚ್ ಆರೋಗ್ಯ ಅಧಿಕಾರಿಗಳು ಶನಿವಾರ ದೃಢಪಡಿಸಿದ್ದಾರೆ.
ಬ್ರಿಟನ್‌ನಲ್ಲಿ ವಾಸವಾಗಿದ್ದ ಫ್ರೆಂಚ್ ನಾಗರಿಕರೊಬ್ಬರು ಡಿಸೆಂಬರ್ 19ರಂದು ಫ್ರಾನ್ಸ್‌ಗೆ ಆಗಮಿಸಿದ್ದು ಅವರು ರೂಪಾಂತರಿತ ಕೊರೋನ ವೈರಸ್ ಸೋಂಕಿತರಾಗಿರುವುದು ದೃಢಪಟ್ಟಿದೆ. ಅವರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ ಮತ್ತು ಅವರನ್ನು ಟೌರ್ಸ್ ನಗರದಲ್ಲಿರುವ ಸ್ವಗೃಹದಲ್ಲಿ ಐಸೋಲೇಶನ್‌ನಲ್ಲಿರಿಸಲಾಗಿದೆಯೆಂದು ಅಧಿಕೃತ ಮೂಲಗಳು ತಿಳಿಸಿವೆ.
Next Story





