ಕೋವಿಡ್ ನೆರವು ಪ್ಯಾಕೇಜ್‌ಗೆ ಸಹಿಹಾಕಲು ಟ್ರಂಪ್ ನಕಾರ
ಲಕ್ಷಾಂತರ ಮಂದಿಯ ನಿರುದ್ಯೋಗ ಸೌಲಭ್ಯಗಳಿಗೆ ಸಂಚಕಾರ

ವಾಶಿಂಗ್ಟನ್,ಡಿ.26:2.3 ಟ್ರಿಲಿಯನ್ ಡಾಲರ್ ಮೊತ್ತದ ಕೊರೋನ ಸೋಂಕು ನಿಯಂತ್ರಣ ನೆರವು ಹಾಗೂ ವೆಚ್ಚದ ಪ್ಯಾಕೇಜ್‌ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿಹಾಕಲು ನಿರಾಕರಿಸಿದ್ದಾರೆ. ದೈನಂದಿನ ಜನಜೀವನಕ್ಕೆ ಈ ಪ್ಯಾಕೇಜ್‌ನಿಂದ ಯಾವುದೇ ಪ್ರಯೋಜನವಾಗಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿರುವ ಸಾವಿರಾರು ಅಮೆರಿಕನ್ನರಿಗೆ ನಿರುದ್ಯೋಗ ಭತ್ತೆ ಸೌಲಭ್ಯವನ್ನು ಒದಗಿಸುವುದು ಸೇರಿದಂತೆ 892 ಬಿಲಿಯನ್ ಡಾಲರ್ ಮೊತ್ತದ ಕೊರೋನ ವೈರಸ್ ಪರಿಹಾರ ನಿಧಿ ಹಾಗೂ ಸಾಮಾನ್ಯ ಸರಕಾರಿ ವೆಚ್ಚಕ್ಕಾಗಿ 2.4 ಟ್ರಿಲಿಯನ್ ಡಾಲರ್ ನಿಧಿಯ ಅವಧಿಯು ಡಿಸೆಂಬರ್ 26 ರಂದು ಕೊನೆಗೊಂಡಿದೆ.
ಪ್ಯಾಕೇಜ್‌ನ ಅವಧಿಯನ್ನು ವಿಸ್ತರಿಸುವುದಕ್ಕೆ ಟ್ರಂಪ್ ಅವರು ಅಂಗೀಕಾರ ನೀಡದೆ ಇದ್ದ ಪರಿಣಾಮವಾಗಿ 1.40 ಕೋಟಿಗೂ ಅಧಿಕ ಮಂದಿ ನಿರುದ್ಯೋಗಿಗಳು ತಮಗೆ ದೊರೆಯುತ್ತಿದ್ದ ಹೆಚ್ಚುವರಿ ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದಾರೆಂದು ಕಾರ್ಮಿಕ ಇಲಾಖೆ ದತ್ತಾಂಶಗಳು ತಿಳಿಸಿವೆ.
Next Story





