ಅಮೆರಿಕ: ಬಂದೂಕುಧಾರಿಯ ಗುಂಡಿನ ದಾಳಿಗೆ ಮೂವರು ಬಲಿ, ಮೂವರಿಗೆ ಗಾಯ

ವಾಷಿಂಗ್ಟನ್: ಅಮೆರಿಕದ ರಾಜ್ಯ ಇಲ್ಲಿನಾಯ್ಸನ ಬೌಲಿಂಗ್ ಅಲ್ಲೆನಲ್ಲಿ ಬಂದೂಕುಧಾರಿಯೊಬ್ಬ ನಡೆಸಿರುವ ಗುಂಡಿನ ಹಾರಾಟಕ್ಕೆ ಮೂವರು ಮೃತಪಟ್ಟಿದ್ದರೆ, ಇನ್ನು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಾನ್ ಕಾರ್ಟರ್ ಲೇನ್ಸ್‌ನಲ್ಲಿ ನಡೆದಿರುವ ಗುಂಡು ಹಾರಾಟದ ಘಟನೆಯ ನಂತರ ಓರ್ವ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಕ್‌ಫೋರ್ಡ್ ಪೊಲೀಸ್ ಮುಖ್ಯಸ್ಥ ಡಾನ್ ಒಶಿಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ವ್ಯಕ್ತಿ ಹಾಗೂ ಬಲಿಪಶುಗಳ ಕುರಿತು ಪೊಲೀಸ್ ಮುಖ್ಯಸ್ಥ ಡಾನ್ ಹೆಚ್ಚಿನ ಮಾಹಿತಿ ನೀಡಲಿಲ್ಲ. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆಂದು ಖಚಿತಪಡಿಸಲಾಗಿದೆ. ಗಾಯಾಳುಗಳನ್ನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ ಎಂದರು.
ರಾಕ್‌ಫೋರ್ಡ್ ಚಿಕಾಗೋದ ವಾಯುವ್ಯಕ್ಕೆ 80 ಮೈಲಿ(130 ಕಿ.ಮೀ.)ದೂರದಲ್ಲಿದೆ.
Next Story