ಕಾರ್ಕಳ: 11 ಗಂಟೆ ವೇಳೆ ಶೇ.14 ಮತದಾನ
![ಕಾರ್ಕಳ: 11 ಗಂಟೆ ವೇಳೆ ಶೇ.14 ಮತದಾನ ಕಾರ್ಕಳ: 11 ಗಂಟೆ ವೇಳೆ ಶೇ.14 ಮತದಾನ](https://www.varthabharati.in/sites/default/files/images/articles/2020/12/27/272808-1609049795.gif)
ಕಾರ್ಕಳ, ಡಿ.27: ಗ್ರಾಪಂ ಎರಡನೇ ಹಂತದ ಚುನಾವಣೆ ರವಿವಾರ ನಡೆಯುತ್ತಿದ್ದು, ತಾಲೂಕಿನಾದ್ಯಂತ ಬಿರುಸಿನಿಂದ ಮತದಾನ ನಡೆಯುತ್ತಿದೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದ್ದು, ಮತ ಕೇಂದ್ರಗಳಲ್ಲಿ ಬೆಳಗ್ಗೆನಿಂದಲೇ ಮತದಾರರು ಉತ್ಸಾಹದಲ್ಲಿ ಭಾಗವಹಿಸುತ್ತಿರುವುದು ಕಂಡುಬಂದರು.
27 ಗ್ರಾ.ಪಂ.ನ 187 ಮತಗಟ್ಟೆಗಳಲ್ಲೂ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. ಕಾರ್ಕಳದಲ್ಲಿ 11 ಗಂಟೆಯ ವೇಳೆ 14 ಶೇ. ಮತದಾನವಾಗಿದೆ.
ನಕ್ಸಲ್ ಪೀಡಿತ ಗ್ರಾಮಗಳೆಂದು ಪರಿಗಣಿತವಾಗಿರುವ ನೂರಾಲ್ಬೆಟ್ಟು, ಈದು, ಮಾಳ, ಅಂಡಾರು, ಶಿರ್ಲಾಲು, ಕೆರ್ವಾಶೆಗಳಲ್ಲೂ ಪೊಲೀಸ್ ವಿಶೇಷ ಭದ್ರತೆಯೊಂದಿಗೆ ಮತದಾನ ನಡೆಯುತ್ತಿದೆ.
![](https://www.varthabharati.in/sites/default/files/images/galllery/2020/12/27/27-thellaru-1.gif)
Next Story