ಮೇಲಂಗಡಿ: ಎಸ್ಸೆಸ್ಸೆಫ್ ಶಾಖೆಯ ವಾರ್ಷಿಕ ಮಹಾ ಸಭೆ

ಉಳ್ಳಾಲ : ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ವಾರ್ಷಿಕ ಮಹಾ ಸಭೆಯು ಶಾಖೆ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.
ಶಾಖಾ ಅಧ್ಯಕ್ಷರಾದ ಹಸೈನಾರ್ ಹಿಮಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರ. ಕಾರ್ಯದರ್ಶಿ ಕಲಂದರ್ ಹುಸೈನ್ ಸ್ವಾಗತಿಸಿದರು. ಡಿವಿಶನ್ ನಾಯಕ ಜಾಫರ್ ಯು.ಎಸ್. ಅಳೇಕಲ ಉದ್ಘಾಟಿಸಿದರು. ಸಭೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಹಂಝ ಸುಂದರಿಬಾಗ್ ಹಾಗೂ ಮುಝಮ್ಮಿಲ್ ಮದನಿ ಮತ್ತು ಸೆಕ್ಟರ್ ಎಸ್ ಇ ಒ ಹಾಶಿರ್ ಕೋಡಿ ಉಪಸ್ಥಿತರಿದ್ದರು.
ಈ ಸಂದರ್ಭ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಮುಹಮ್ಮದ್ ನಿಝಾಮುದ್ದೀನ್, ಪ್ರ. ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಮುಹಾಝ್, ಕೋಶಾಧಿಕಾರಿಯಾಗಿ ಕಲಂದರ್ ಹುಸೈನ್ ಅವರನ್ನು ಆಯ್ಕೆ ಮಾಡಲಾಯಿತು ಹಾಗೂ 2 ಉಪಾಧ್ಯಕ್ಷರನ್ನು ಮತ್ತು 6 ಜೊತೆ ಕಾರ್ಯದರ್ಶಿಗಳನ್ನು ಹಾಗೂ 19 ಕಾರ್ಯಕಾರಿ ಸಮಿತಿಗಳನ್ನ ಆರಿಸಲಾಯಿತು. ನೂತನ ಕಾರ್ಯದರ್ಶಿ ಇಸ್ಮಾಯಿಲ್ ಮುಹಾಝ್ ವಂದಿಸಿದರು.
Next Story





