Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೊಸ ವರ್ಷದಲ್ಲಿ ಆಕಾಶದ ವಿದ್ಯಮಾನಗಳು:...

ಹೊಸ ವರ್ಷದಲ್ಲಿ ಆಕಾಶದ ವಿದ್ಯಮಾನಗಳು: 2021ರಲ್ಲಿ ಭಾರತೀಯರಿಗಿಲ್ಲ ಗ್ರಹಣಗಳ ದರ್ಶನ

ವಾರ್ತಾಭಾರತಿವಾರ್ತಾಭಾರತಿ27 Dec 2020 7:17 PM IST
share
ಹೊಸ ವರ್ಷದಲ್ಲಿ ಆಕಾಶದ ವಿದ್ಯಮಾನಗಳು: 2021ರಲ್ಲಿ ಭಾರತೀಯರಿಗಿಲ್ಲ ಗ್ರಹಣಗಳ ದರ್ಶನ

ಉಡುಪಿ, ಡಿ.27: ನಾಡಿನ ಆಕಾಶ ವೀಕ್ಷಕರು ಹಾಗೂ ಆಕಾಶಕಾಯಗಳ ಆಸಕ್ತರಿಗೆ 2019 ಮತ್ತು 2020 ಸಾಕಷ್ಟು ಆಸಕ್ತಿಕರ ವಿದ್ಯಾಮಾನ ಗಳು ಘಟಿಸಿದ ವರ್ಷಗಳಾಗಿದ್ದರೆ 2021ರಲ್ಲಿ ಭಾರತೀಯರಿಗೆ ಒಂದೇ ಒಂದು ಗ್ರಹಣದ ದರ್ಶನ ಭಾಗ್ಯ ಲಭಿಸುವುದಿಲ್ಲ ಎಂದು ಖಾತ್ಯ ಖಭೌತ ವಿಜ್ಞಾನಿ ಹಾಗೂ ನಿವೃತ್ತ ಪ್ರಾಂಶುಪಾಲ ಡಾ.ಎ.ಪಿ.ಭಟ್ ತಿಳಿಸಿದ್ದಾರೆ.

ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುತ್ತವೆ. ಮೇ 26ಕ್ಕೆ ಖಗ್ರಾಸ ಚಂದ್ರಗ್ರಹಣ, ಜೂನ್10ಕ್ಕೆ ಕಂಕಣ ಸೂರ್ಯ ಗ್ರಹಣ, ನವೆಂಬರ್ 19ಕ್ಕೆ ಪಾರ್ಶ್ವ ಚಂದ್ರಗ್ರಹಣ ಹಾಗೂ ಡಿಸೆಂಬರ್ 4ಕ್ಕೆ ಖಗ್ರಾಸ ಸೂರ್ಯ ಗ್ರಹಣಗಳು ಸಂಭವಿಸುತ್ತವೆಯಾದರೂ ಭಾರತದವರಿಗೆ ಇವು ಗೋಚರಿಸುವುದಿಲ್ಲ.

2021ರ ಇನ್ನೊಂದು ವಿಶೇಷವೆಂದರೆ, ವರ್ಷದಲ್ಲಿ ನಾಲ್ಕು ಸೂಪರ್ ಮೂನ್ ಗಳು ಗೋಚರಿಸುತ್ತವೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯ ಸಂದರ್ಭಕ್ಕಿಂತ ದೊಡ್ಡದಾಗಿ ಗೋಚರಿಸುತ್ತಾನೆ. ಮಾರ್ಚ್ 28, ಎಪ್ರಿಲ್ 27, ಮೇ 26 ಹಾಗೂ ಜೂನ್ 24ರ ಹುಣ್ಣಿಮೆಗಳು ಚಂದ್ರ ಎಂದಿಗಿಂತ ಸುಮಾರು ಶೇ. 25ರಷ್ಟು ದೊಡ್ಡದಾಗಿ ಕಾಣುವ ಸೂಪರ್ ಮೂನ್‌ಗಳಾಗಿರುತ್ತವೆ.

ಉಲ್ಕಾಪಾತಗಳು: ಇನ್ನು ಪ್ರತೀ ವರ್ಷ ಸಂಭವಿಸುವ ಮಾಮೂಲಿ 15 ಉಲ್ಕಾಪಾತಗಳಲ್ಲಿ ಈ ವರ್ಷ ಕೆಲವೇ ಉಲ್ಕಾಪಾತಗಳು ಪ್ರಮುಖ ವಾದವು ಗಳು. ಜನವರಿ 4ರ ಕ್ವಾಡ್ರಂಟಿಡ್ ಉಲ್ಕಾಪಾತ ಗಂಟೆಗೆ ಅಂದಾಜು ಸುಮಾರು 120, ಆಗಸ್ಟ್ 12ರ ಪರ್ಸಿಡ್ ಉಲ್ಕಾಪಾತ ಗಂಟೆಗೆ 150 ಹಾಗೂ ಡಿಸೆಂಬರ್ 14ರ ಜಿಮಿನಿಡ್ ಉಲ್ಕಾಪಾತಗಳು ಪ್ರಮುಖವಾದವುಗಳು. ಚಂದ್ರನಿಲ್ಲದ ಆಕಾಶ ಉಲ್ಕಾಪಾತದ ಸೌಂದರ್ಯ ವೀಕ್ಷಣೆಗೆ ಹೆಚ್ಚು ಪ್ರಶಸ್ತ.

ಪ್ರತೀ ವರ್ಷಕ್ಕೊಮ್ಮೆ ಚೆಂದವಾಗಿ, ದೊಡ್ಡದಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು ಈ ಬಾರಿಯೂ ಆಕರ್ಷಕವಾಗಿ ಕಾಣಲು ಸಿಗುತ್ತದೆ. ಆಗಸ್ಟ್ 2ರಂದು ಶನಿಗ್ರಹ ಹಾಗೂ ಆಗಸ್ಟ್ 20ರಂದು ಗುರುಗ್ರಹ ರಾತ್ರಿ ಇಡೀ ಕಾಣಲು ಸಿಗಲಿವೆ. ಆಗಸ್ಟ್ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಲಿವೆ.

ಎಪ್ರಿಲ್ 27ರಂದು ಮಂಗಳನನ್ನೇ ಚಂದ್ರ ಅಡ್ಡವಾಗಿ ಮರೆಮಾಚುವ ಕೌತುಕವೊಂದು (lunar occultation of Mars) ಆಕಾಶದಲ್ಲಿ ನಡೆಯಲಿದೆ. ಫೆಬ್ರವರಿ ಮೊದಲ ವಾರದವರೆಗೆ ಬೆಳಗಿನ ಜಾವದಲ್ಲಿ ಕಾಣಲು ಸಿಗುವ ಶುಕ್ರ ನಂತರ, ಎಪ್ರಿಲ್ 21ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ವೇಳೆ ಗೋಚರಿಸಲಿದೆ.

ಸುಮಾರು 584 ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಚೆಂದವಾಗಿ ದೊಡ್ಡ ದಾಗಿ ಕಾಣುವ ಶುಕ್ರ ಗ್ರಹ, ಅಕ್ಟೋಬರ್ 29ರಂದು 47 ಡಿಗ್ರಿ ಎತ್ತರದಲ್ಲಿ ಪಶ್ಚಿಮ ಆಕಾಶದಲ್ಲಿ ಕಾಣಿಸಿಕೊಳ್ಳಲಿದೆ.

ಬುಧ ಗ್ರಹದ ದರ್ಶನ ಕಷ್ಟ:   ವರ್ಷದಲ್ಲಿ ಹೆಚ್ಚೆಂದರೆ ಬರೇ ಆರು ಬಾರಿ, ಒಂದು ವಾರ ಕಾಲ ಕಾಣುವ ಬುಧ ಗ್ರಹ, ಈ ವರ್ಷ ಜನವರಿ 24, ಮೇ 17, ಸೆಪ್ಟೆಂಬರ್ 14ರಂದು ಸಂಜೆಯ ಸೂರ್ಯಾಸ್ತವಾದ ಕೆಲ ನಿಮಿಷಗಳ ಕಾಲ ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾರ್ಚ್ 6, ಜುಲೈ 4 ಹಾಗೂ ಅಕ್ಟೋಬರ್ 25ರಂದು ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣಲು ಸಿಗುತ್ತದೆ.

ಸೂರ್ಯನ ಸುತ್ತ ದೀರ್ಘ ವೃತ್ತಾಕಾರದಲ್ಲಿ ಸುತ್ತುವ ಭೂಮಿ ಜನವರಿ 2ರಂದು ಸಮೀಪದಲ್ಲಿದ್ದರೆ ( ಪೆರಿಜಿ) ಜುಲೈ 6ರಂದು ದೂರದಲ್ಲಿ (ಅಪೊಜಿ) ಯಲ್ಲಿರುತ್ತದೆ.

ಆಕಾಶಕಾಯಗಳ ವೀಕ್ಷಣೆಯ ಆಸಕ್ತಿ ಉಳ್ಳವರು 2021ರಲ್ಲಿ ನಿರೀಕ್ಷಿಸ ಬಹುದಾದ ಕೆಲವು ಕೌತುಕಗಳು, ವಿದ್ಯಮಾನಗಳ ಕುರಿತು ಬೆಳಕು ಚೆಲ್ಲಿದ ಡಾ.ಎ.ಪಿ.ಭಟ್ ಈ ವಿಷಯ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X