ಡಿ.30ರಿಂದ ಜ.2: ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿಲ್ಲ : ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಡಿ.27: ಹೊಸ ವರ್ಷದ ಸಂಭ್ರಮಾಚರಣೆಗೆ ಸಂಬಂಧಿಸಿದಂತೆ ಡಿ.30,31, ಜ.1 ಹಾಗೂ 2ರವರೆಗೆ ಯಾವುದೇ ವಿಶೇಷ ಕಾರ್ಯ ಕ್ರಮದ ಆಯೋಜನೆಗೆ ಅವಕಾಶವಿರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತು ಇಂದು ವೀಡಿಯೊ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಜಿಲ್ಲಾಧಿಕಾರಿ, ಕಳೆದ ಡಿ.17ರಂದು ರಾಜ್ಯ ಸರಕಾರ ಹೊರಡಿಸಿದ ಆದೇಶ ಹಾಗೂ ಮಾರ್ಗಸೂಚಿಯಲ್ಲಿ ಹೊಸವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೆಂಬು ದನ್ನು ವಿವರವಾಗಿ ತಿಳಿಸಲಾಗಿತ್ತು. ಅವುಗಳನ್ನು ಸಾರ್ವಜನಿಕರೆಲ್ಲರೂ ಪಾಲಿಸಲೇ ಬೇಕು ಎಂದವರು ಹೇಳಿದ್ದಾರೆ.
ಇದೇ ಡಿ.30,31, ಜ.1 ಮತ್ತು 2ಕ್ಕೆ ಈ ಆದೇಶ ಅನ್ವಯಿಸುತ್ತೆ. ಇದರಂತೆ ಕ್ಲಬ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು ಹೊಟೇಲ್‌ಗಳು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವಂತಿಲ್ಲ, ಸಾರ್ವಜನಿಕರನ್ನು ಸೇರಿಸುವಂತಿಲ್ಲ. ವಿಶೇಷ ಆಫರ್‌ಗಳ ಆಮಿಷವನ್ನು ಒಡ್ಡುವಂತಿಲ್ಲ. ಆದರೆ ದಿನ ನಿತ್ಯದ ಕಾರ್ಯಕ್ರಮಗಳನ್ನು ಮಾಡಲು ಯಾವುದೇ ತೊಂದರೆ ಇಲ್ಲ. ಹೊಟೇಲ್‌ಗಳಿಗೆ ಗ್ರಾಹಕರು, ಕ್ಲಬ್‌ಗಳ ಸದಸ್ಯರು ಬಂದಾಗ ಎಂದಿನ ಕಾರ್ಯಕ್ರಮಕ್ಕೆ ಅವಕಾಶವಿದೆ. ಆದರೆ ಹೊಸವರ್ಷದ ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಅವಕಾಶವಿರುವುದಿಲ್ಲ ಎಂದು ಜಗದೀಶ್ ತಿಳಿಸಿದರು.
ಸಾರ್ವಜನಿಕ ಸಂಭ್ರಮಾಚರಣೆಗೆ ಅವಕಾಶವಿಲ್ಲ: ಇದರೊಂದಿಗೆ ಹೊಸ ವರ್ಷದ ನಿಮಿತ್ತ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ ಸಾರ್ವಜನಿಕ ಸಂಭ್ರಮಾಚರಣೆಗೂ ನಿರ್ಬಂಧವಿದೆ. ಆದುದರಿಂದ ಸಾರ್ವಜನಿಕರು ತಮ್ಮ ತಮ್ಮ ಮನೆಗಳಲ್ಲೇ ಹೊಸ ವರ್ಷದ ಸಂಭ್ರಮಾಚರಣೆ ಮಾಡು ವಂತೆ ಅವರು ತಿಳಿಸಿದ್ದಾರೆ.
ಅಲ್ಲದೇ ಪಟಾಕಿ ಹೊಡೆಯುವವರಿದ್ದರೆ ಅವರು ಈಗಾಗಲೇ ಸರಕಾರ ಅನುಮತಿ ನೀಡಿರುವಂತೆ ಹಸಿರು ಪಟಾಕಿಗಳನ್ನು ಮಾತ್ರ ಹೊಡೆಯ ಬೇಕು. ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವುದಿದ್ದರೂ ಮಾಸ್ಕ್ ಹಾಗೂ ಸುರಕ್ಷತಾ ಅಂತರವನ್ನು ಡ್ಡಾಯವಾಗಿ ಕಾಪಾಡಬೇಕು. ಇದನ್ನು ಅನುಸರಿಸುವ ಮೂಲಕ ಕೋವಿಡ್‌ನ್ನು ಜಿಲ್ಲೆಯಿಂದ ಹೊಡೆದೊಡಿಸಲು ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಹೇಳಿರುವ ಜಿಲ್ಲಾಧಿಕಾರಿ ಜಗದೀಶ್, ಜಿಲ್ಲೆಯ ಜನತೆಗೆ ಹೊಸವರ್ಷದ ಶುಭಾಶಯಗಳನ್ನು ಹೇಳಿದ್ದಾರೆ.







