ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಕಾರ್ಕಳ, ಡಿ.27: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಡಿ.26ರಂದು ರಾತ್ರಿ ಮುಂಡ್ಕೂರು ಎಂಬಲ್ಲಿ ನಡೆದಿದೆ.
ರಾಘವೇಂದ್ರ ಕಾಮತ್ ಎಂಬವರ ಮನೆಯ ಹಿಂಬದಿ ಬಾಗಿಲನ್ನು ನೂಕಿ ಒಳನುಗ್ಗಿದ ಕಳ್ಳರು, ಮಲಗುವ ಕೊಠಡಿಗಳ ಕಪಾಟಿನಲ್ಲಿ ಇರಿಸಿದ್ದ 2 ಮಾಂಗಲ್ಯ ಸರ, 4 ಚಿನ್ನದ ಬಳೆಗಳು, ಎರಡು ಲಕ್ಷ್ಮೀ ಸರಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ 7,00,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





