ಲಾರಿ ಢಿಕ್ಕಿ: ಕೂಲಿ ಕಾರ್ಮಿಕ ಮೃತ್ಯು
ಬೈಂದೂರು, ಡಿ.27: ಲಾರಿಯನ್ನು ಚಾಲಕ ಹಿಮ್ಮುಖವಾಗಿ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ಹಿಂಬದಿಯಲ್ಲಿ ನಿಂತಿದ್ದ ಕೂಲಿ ಕಾರ್ಮಿಕ ರೊಬ್ಬರು ಮೃತಪಟ್ಟ ಘಟನೆ ಶಿರೂರು ಅರಮನೆಹಕ್ಲು ಎಂಬಲ್ಲಿ ಡಿ.26ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಗಣಪತಿ ಶೇರುಗಾರ ಎಂದು ಗುರುತಿಸಲಾಗಿದೆ. ಅರಮನೆ ಹಕ್ಲುವಿನ ರೆಹಮಾನ್ ಸಾಹೇಬ್ ಎಂಬವರ ಜಾಗದಲ್ಲಿದ್ದ ಸಿಮೆಂಟ್ ಕಲ್ಲು ಮಿಶ್ರಿತ ಮಣ್ಣು ತುಂಬಿಸಲು ಬಂದ ಟಿಪ್ಪರ್ ಲಾರಿಯನ್ನು ಚಾಲಕ, ನಿರ್ಲಕ್ಷ ದಿಂದ ಹಿಮ್ಮುಖವಾಗಿ ಚಲಾಯಿಸಿದ ಎನ್ನಲಾಗಿದೆ.
ಇದರಿಂದ ಮಣ್ಣು ತುಂಬಿಸುವ ಸ್ಥಳದಲ್ಲಿ ನಿಂತುಕೊಂಡಿದ್ದ ಗಣಪತಿಗೆ ಲಾರಿ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ಗಂಭೀರವಾಗಿ ಗಾಯ ಗೊಂಡ ಅವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story