ದ್ವಿತೀಯ ಹಂತದ ಗ್ರಾಪಂ ಚುನಾವಣೆ : ದ.ಕ.ಜಿಲ್ಲೆಯಲ್ಲಿ ಶೇ.78.67 ಮತದಾನ
ಮಂಗಳೂರು, ಡಿ.27: ದ.ಕ.ಜಿಲ್ಲೆಯ ನಾಲ್ಕು ತಾಲೂಕಿನ 114 ಗ್ರಾಪಂಗಳಿಗೆ ರವಿವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಶೇ.78.67 ಶಾಂತಿಯುತ ಮತದಾನವಾಗಿದೆ.
ಬೆಳ್ತಂಗಡಿಯಲ್ಲಿ ಶೇ.78.43, ಪುತ್ತೂರಿನಲ್ಲಿ ಶೇ.78.45, ಕಡಬದಲಲಿ 77.61, ಸುಳ್ಯದಲ್ಲಿ 80.54 ಮತದಾನವಾಗಿದೆ. ಬೆಳ್ತಂಗಡಿಯ 46, ಪುತ್ತೂರಿನ 22, ಕಡಬದ 21, ಸುಳ್ಯದ 25 ಸಹಿತ 114 ಗ್ರಾಪಂಗಳ 1541 ಸ್ಥಾನಗಳ ಪೈಕಿ 41 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದರಿಂದ 1,500 ಸ್ಥಾನಗಳಿಗೆ 3,421 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಡಿ.22ರಂದು ನಡೆದ ಮೊದಲ ಹಂತ ಸಹಿತ ರವಿವಾರ ನಡೆದ ಚುನಾವಣೆಯ ಫಲಿ ತಾಂಶ ಡಿ.30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
Next Story





