ಅಗತ್ಯದ ಸಾಧನ ಸ್ವೀಕರಿಸಲು ನಾಗಪುರ ಕಾರಾಗೃಹ ಆಡಳಿತ ನಿರಾಕರಣೆ
ದಿಲ್ಲಿ ವಿ.ವಿ.ಯ ಮಾಜಿ ಪ್ರಾದ್ಯಾಪಕ ಜಿ.ಎನ್. ಸಾಯಿಬಾಬಾ ವಕೀಲ ಆರೋಪ

ನಾಗಪುರ, ಡಿ. 27: ತಾನು ತನ್ನ ಕಕ್ಷಿದಾರನಾಗಿರುವ ಜೆ.ಎನ್. ಸಾಯಿಬಾಬಾ ಅವರಿಗೆ ತಂದ ಕೆಲವು ಪುಸ್ತಕಗಳು, ಖಾಲಿ ಕಾಗದದ ಹಾಳೆಗಳು, ಟವೆಲ್ ಹಾಗೂ ಫಿಸಿಯೋಥೆರಪಿಗೆ ಬಳಸುವ ಸಾಧನ ಸೇರಿದಂತೆ ಹಲವು ಸಾಧನಗಳನ್ನು ಕಾರಾಗೃಹದ ಅಧಿಕಾರಿಗಳು ಸ್ವೀಕರಿಸಲು ನಿರಾಕರಿಸಿದೆ ಎಂದು ಜಿ.ಎನ್. ಸಾಯಿಬಾಬಾ ಅವರ ಪರ ವಕೀಲರು ಆರೋಪಿಸಿದ್ದಾರೆ.
ಮಾವೋವಾದಿಗಳೊಂದಿಗೆ ನಂಟಿನ ಆರೋಪದಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕರು ಜಿ.ಎನ್. ಸಾಯಿಬಾಬಾ ಅವರು ನಾಗಪುರದ ಕೇಂದ್ರ ಕಾರಾಗೃಹದಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.
ಸಾಯಿಬಾಬಾ ಅವರಿಗೆ ಅಗತ್ಯ ಇರುವ ಹೆಚ್ಚಿನ ಸಾಧನಗಳನ್ನು ನಾವು ಸ್ವೀಕರಿಸಿದ್ದೇವೆ. ಆದರೆ, ಎಲ್ಲಾ ವಸ್ತುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಕಾರಾಗೃಹದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮಾವೋವಾದಿಗಳೊಂದಿಗೆ ನಂಟು ಹೊಂದಿರುವ ಹಾಗೂ ದೇಶದ ವಿರುದ್ಧ ಹೋರಾಟ ಉತ್ತೇಜಿಸುತ್ತಿರುವ ಪ್ರಕರಣದಲ್ಲಿ ಸಾಯಿಬಾಬಾ ಹಾಗೂ ಇತರ ನಾಲ್ವರು ದೋಷಿಗಳು ಎಂದು ಮಹಾರಾಷ್ಟ್ರದ ಗಡ್ಚಿರೋಳಿ ನ್ಯಾಯಾಲಯ 2017ರಲ್ಲಿ ತೀರ್ಪು ನೀಡಿತ್ತು.
Next Story





