ರಾಜ್ಯ ಬಿಜೆಪಿ ಶಾಸಕರಲ್ಲಿ ಕ್ಯಾಟಗರಿ: ಕಾಂಗ್ರೆಸ್ ಟ್ವೀಟ್

ಬೆಂಗಳೂರು, ಡಿ. 27: 'ರಾಜ್ಯ ಬಿಜೆಪಿಯ ಶಾಸಕರಲ್ಲಿ ಕ್ಯಾಟಗರಿ ಇದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಂದ ತಿಳಿಯಿತು' ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
'ಬಿಜೆಪಿಯಲ್ಲಿ ಅರ್ಡಿನರಿ ಶಾಸಕರು, ಆಪರೇಷನ್ ಶಾಸಕರು, ಅಡ್ನಾಡಿ ಶಾಸಕರು, ಒರಿಜಿನಲ್ ಶಾಸಕರು, ಮೂಲ ಶಾಸಕರು, ವಲಸೆ ಶಾಸಕರು ಹಾಗೂ ಲೂಟಿ ಶಾಸಕರು!. ಹೀಗಿರುವಾಗ ರಾಜ್ಯ ಉದ್ದಾರವಾಗುವುದು ಹೇಗೆ?' ಎಂದು ರವಿವಾರ ಕಾಂಗ್ರೆಸ್ ಟ್ವೀಟ್ ಮಾಡಿದೆ.
ರಾಜ್ಯದಲ್ಲಿ ನೆರೆ, ಬರ ಪರಿಹಾರ, ಜಿಎಸ್ಟಿ ಪಾಲು, ಪಿಎಂ ಕೇರ್ಸ್ ಇತ್ಯಾದಿಗಳಲ್ಲಿ ರಾಜ್ಯದ ಪರ ನಿಲ್ಲದ 25 ಸಂಸದರು ಇದ್ದರೆಸ್ಟು ಬಿಟ್ಟರೆಸ್ಟು! ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಪ್ರತಿ ರಾಜ್ಯದಲ್ಲೂ ಆಪರೇಷನ್ ಕಮಲದ ಸರಕಾರ ರಚಿಸುವುದು ಮಹಾ ಸಾಧನೆಯೇ?, ಇತರ ಪಕ್ಷದವರನ್ನ ಸೆಳೆಯುವುದ ಬಿಟ್ಟು ಸ್ವಂತ ಕಾರ್ಯಕರ್ತರನ್ನ ಗೆಲ್ಲಿಸಿ, ಮೊದಲು ನೀವು ಆತ್ಮನಿರ್ಭರರಾಗಿ ಮಾತಾನಾಡಿ ಎಂದು ಕಾಂಗ್ರೆಸ್ ಪಕ್ಷ ಸಲಹೆ ಮಾಡಿದೆ.
'ಮಧುಕರ ಶೆಟ್ಟಿ ಅವರು, ಬಿ.ಎಸ್.ಯಡಿಯೂರಪ್ಪ ಅವರ ಅಕ್ರಮ ಡಿನೋಟಿಫಿಕೇಶನ್ ಪ್ರಕರಣ, ಕೆಐಎಡಿಬಿ ಭೂ ಹಗರಣ ಪತ್ತೆ, ಅಕ್ರಮ ಗಣಿಗಾರಿಕೆ ತನಿಖೆ, ಲಂಚ ಸ್ವೀಕರಿಸುತ್ತಿರುವಾಗ ಬಿಜೆಪಿ ಶಾಸಕ ಸಂಪಂಗಿಯ ಬಂಧನದ ಮೂಲಕ ಬಿಜೆಪಿ ಸರಕಾರಕ್ಕೆ ಸಿಂಹಸ್ವಪ್ನವಾಗಿದ್ದರು. ಬಿಜೆಪಿಯ ದ್ವೇಷ ರಾಜಕಾರಣದಿಂದ ದಕ್ಷ ಅಧಿಕಾರಿಗೆ ಅಪಮಾನ' ಮಾಡಲಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
'ದಕ್ಷ, ಪ್ರಾಮಾಣಿಕ ಐಪಿಎಸ್ ಅಧಿಕಾರಿ, ಹಲವು ಯುವ ಅಧಿಕಾರಿಗಳಿಗೆ ಸ್ಫೂರ್ತಿಯಾಗಿ, ಯುವ ಸಮುದಾಯಕ್ಕೆ ಮಾದರಿಯಾಗಿದ್ದವರು ಮಧುಕರ್ ಶೆಟ್ಟಿ. ಅವರ ಹೆಸರನ್ನು ವರ್ತೂರು ಕೋಡಿ ವೃತ್ತಕ್ಕೆ ಇಡುವ ಪ್ರಸ್ತಾಪವನ್ನು ನಿರಾಕರಿಸಿ ಬಿಜೆಪಿ ಸರಕಾರ ಕೀಳುಮಟ್ಟದ ದ್ವೇಷ ರಾಜಕಾರಣಕ್ಕೆ ಮುಂದಾಗಿದ್ದು ಖಂಡನೀಯ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'@BJP4Karnatakaಯ ಶಾಸಕರಲ್ಲಿ ಕ್ಯಾಟಗರಿ ಇದೆ ಎಂದು @DVSadanandGowda ಅವರಿಂದ ತಿಳಿಯಿತು !!
— Karnataka Congress (@INCKarnataka) December 27, 2020
◆ಆರ್ಡಿನರಿ ಶಾಸಕರು
◆ಆಪರೇಷನ್ ಶಾಸಕರು
◆ಅಡ್ನಾಡಿ ಶಾಸಕರು
◆ಒರಿಜಿನಲ್ ಶಾಸಕರು
◆ಮೂಲ ಶಾಸಕರು
◆ವಲಸೆ ಶಾಸಕರು
◆ಲೂಟಿ ಶಾಸಕರು!
ಹೀಗಿರುವಾಗ ರಾಜ್ಯ ಉದ್ಧಾರವಾಗುವುದು ಹೇಗೆ?







