ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ವಿ.ಎಂ ಮುನೀರ್ ಅಧಿಕಾರ ಸ್ವೀಕಾರ
![ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ವಿ.ಎಂ ಮುನೀರ್ ಅಧಿಕಾರ ಸ್ವೀಕಾರ ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ವಿ.ಎಂ ಮುನೀರ್ ಅಧಿಕಾರ ಸ್ವೀಕಾರ](https://www.varthabharati.in/sites/default/files/images/articles/2020/12/28/272912-1609148877.jpg)
ಕಾಸರಗೋಡು : ಕಾಸರಗೋಡು ನಗರಸಭಾ ಅಧ್ಯಕ್ಷರಾಗಿ ಮುಸ್ಲಿಂ ಲೀಗ್ ನ ನ್ಯಾಯವಾದಿ ವಿ.ಎಂ ಮುನೀರ್ ಅಧಿಕಾರ ಸ್ವೀಕರಿಸಿಕೊಂಡಿ ದ್ದಾರೆ. ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸವಿತಾ ಟೀಚರ್ ಅವರನ್ನು ಸೋಲಿಸಿದರು. ಮುನೀರ್ 21 ಮತ್ತು ಸವಿತಾ ಟೀಚರ್ 14 ಮತಗಳನ್ನು ಪಡೆದರು.
ಸಿಪಿಎಂ ಸದಸ್ಯೆ ಲಲಿತಾ, ಇಬ್ಬರು ಪಕ್ಷೇತರ ಸದಸ್ಯ ರಾದ ಫಾತಿಮತ್ ಹಸೀನಾ ಮತ್ತು ಕೆ.ಎಂ ಶಕೀನಾ ಮೊಯ್ದಿನ್ ಮತದಾನದಿಂದ ಹೊರಗುಳಿದರು. ಅಬ್ಬಾಸ್ ಬೀಗಂ ಮುನೀರ್ ರವರ ಹೆಸರು ಸೂಚಿಸಿದರು. ಪಿ. ರಮೇಶ್ ಸವಿತಾ ಟೀಚರ್ ಹೆಸರು ಸೂಚಿಸಿದರು.
51 ವರ್ಷದ ಮುನೀರ್ ತಳಂಗರೆ ಖಾಸಿಲೈನ್ ವಾರ್ಡ್ ನಿಂದ ಗೆಲುವು ಸಾಧಿಸಿದ್ದರು. 38 ಸದಸ್ಯ ಬಲದಲ್ಲಿ ಮುಸ್ಲಿಂ ಲೀಗ್ 21, ಬಿಜೆಪಿ 12, ಸಿಪಿಎಂ 1, ಪಕ್ಷೇತರು 2 ಸ್ಥಾನಗಳನ್ನು ಪಡೆದಿದ್ದಾರೆ.
![](https://www.varthabharati.in/sites/default/files/images/galllery/2020/12/28/NAGARASABHE1.jpg)
Next Story