ಉಡುಗೊರೆ ನೆಪದಲ್ಲಿ ಮಹಿಳೆಗೆ ವಂಚನೆ
ಮಂಗಳೂರು, ಡಿ.28: ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸಿಕೊಟ್ಟಿರುವುದಾಗಿ ಹೇಳಿ ವ್ಯಕ್ತಿಯೋರ್ವರ ಖಾತೆಯಿಂದ 13.35 ಲ.ರೂ. ಪಡೆದು ವಂಚಿಸಿದ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜುಲಿಯಾ ಎಂಬವರ ಫೇಸ್ಬುಕ್ ಖಾತೆಗೆ ಡಾ. ಜಿಮ್ ಕಿಯಾ ಎಂಬ ವ್ಯಕ್ತಿ ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದ. ಜುಲಿಯಾ ಅದನ್ನು ಸ್ವೀಕರಿಸಿದ್ದರು. ಅನಂತರ ಜಿಮ್ ಕಿಯಾ ಎಂಬಾತ ವಾಟ್ಸಪ್ ಮೂಲಕ ಜುಲಿಯಾ ಅವರಿಗೆ ಸಂದೇಶ ಕಳುಹಿಸಿ ಮಗಳ ಹುಟ್ಟುಹಬ್ಬಕ್ಕೆ ಉಡುಗೊರೆ ಕಳುಹಿಸುವು ದಾಗಿ ತಿಳಿಸಿದ. ಆ ಬಳಿಕ ಯಾರೋ ವ್ಯಕ್ತಿ ಜುಲಿಯಾ ಅವರಿಗೆ ಕರೆ ಮಾಡಿ ಕಸ್ಟಮ್ಸ್ ಅಧಿಕಾರಿಗಳೆಂದು ನಂಬಿಸಿ ಬಂದ ಉಡುಗೊರೆಯನ್ನು ಬಿಡಿಸಿಕೊಳ್ಳಲು ಹಣದ ಬೇಡಿಕೆ ಇಟ್ಟು ಬೇರೆ ಬೇರೆ ಖಾತೆ ಸಂಖ್ಯೆಗಳನ್ನು ನೀಡಿ ಜುಲಿಯಾ ಅವರಿಂದ ಒಟ್ಟು 13.35 ಲ.ರೂ. ಪಡೆದು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story