ಡಾ.ಭೈರಮಂಗಲ ರಾಮೇಗೌಡಗೆ ಕಸಾಪ ದತ್ತಿ ಪ್ರಶಸ್ತಿ

ಬೆಂಗಳೂರು, ಡಿ.28: ಕನ್ನಡ ಸಾಹಿತ್ಯ ಪರಿಷತ್ತು ಕೊಡಮಾಡುವ 2021ನೆ ಸಾಲಿನ ‘ಕುವೆಂಪು ಸಿರಿಗನ್ನಡ ದತ್ತಿ ಪ್ರಶಸ್ತಿ’ಗೆ ಸಾಹಿತಿ, ವಿಮರ್ಶಕ ಡಾ.ಭೈರಮಂಗಲ ರಾಮೇಗೌಡ ಆಯ್ಕೆಯಾಗಿದ್ದಾರೆ.
ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ನೇತೃತ್ವದ ಸಮಿತಿ ಈ ಆಯ್ಕೆ ನಡೆಸಿದೆ. ಡಾ.ಭೈರಮಂಗಲ ರಾಮೇಗೌಡರು ನಾಲ್ಕು ದಶಕಗಳಿಂದ ಸತತವಾಗಿ ಕುವೆಂಪು ವಿಚಾರಧಾರೆಯ ಪ್ರಚಾರ ಮತ್ತು ಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುವೆಂಪು ವಿಚಾರಧಾರೆ ಕುರಿತಾದ 4 ಕೃತಿಗಳನ್ನು ರಚಿಸಿದ್ದಾರೆ.
ಪ್ರಶಸ್ತಿ 25 ಸಾವಿರ ನಗದು, ಫಲಕ ಒಳಗೊಂಡಿದೆ. ಪ್ರಶಸ್ತಿಯನ್ನು 2021ರ ಜನವರಿಯಲ್ಲಿ ಪ್ರಧಾನ ಮಾಡಲಾಗುತ್ತದೆ. ಈ ಆಯ್ಕೆ ಸಮಿತಿಯಲ್ಲಿ ಗೌರವ ಕಾರ್ಯದರ್ಶಿ ಕೆ.ರಾಜಕುಮಾರ್, ಪ್ರಕಟಣಾ ಸಮಿತಿಯ ರಾಜ್ಯ ಸಂಚಾಲಕ ಡಾ.ಪದ್ಮರಾಜ ದಂಡಾವತಿ ಉಪಸ್ಥಿತರಿದ್ದರು.
Next Story





