ಕೃಷಿ ಕಾಯ್ದೆಗೆ ವಿರೋಧ: 1,500ಕ್ಕೂ ಅಧಿಕ ಟೆಲಿಕಾಂ ಟವರ್‌ಗೆ ಹಾನಿ

ಹೊಸದಿಲ್ಲಿ, ಡಿ.28: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಪಂಜಾಬ್‌ನಲ್ಲಿ 1,500ಕ್ಕೂ ಅಧಿಕ ಟೆಲಿಕಾಂ ಟವರ್‌ಗೆ ಹಾನಿ ಎಸಗಿದ್ದು ಇದರಿಂದ ಕೆಲವು ಪ್ರದೇಶಗಳಲ್ಲಿ ಸಂಪರ್ಕ ಸೇವೆಗೆ ತೊಡಕಾಗಿದೆ ಎಂದು ಮೂಲಗಳು ಹೇಳಿವೆ.
ಟೆಲಿಕಾಂ ಸಿಗ್ನಲ್‌ಗಳನ್ನು ಪ್ರಸಾರ ಮಾಡುವ ಟವರ್‌ಗಳಿಗೆ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಿದ್ದಲ್ಲದೆ ಕೆಲವೆಡೆ ತಂತಿಗಳನ್ನೂ ಕತ್ತರಿಸಲಾಗಿದೆ. ಈ ಮೂಲಕ ಮುಕೇಶ್ ಅಂಬಾನಿಯವರ ಸಂಸ್ಥೆ ಜಿಯೊ ಹಾಗೂ ಉದ್ಯಮಿ ಗೌತಮ್ ಅದಾನಿಯವರಿಗೆ ಸೇರಿದ ಸಂಸ್ಥೆಗಳ ಮೂಲಸೌಕರ್ಯಕ್ಕೆ ಹಾನಿ ಎಸಗಲಾಗಿದೆ. ಕೇಂದ್ರ ಸರಕಾರದ ಕೃಷಿ ಮಸೂದೆ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಗೆ ಅನುಕೂಲ ಕಲ್ಪಿಸುತ್ತದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ರವಿವಾರದವರೆಗೆ 1,411 ಟೆಲಿಕಾಂ ಟವರ್‌ಗಳಿಗೆ ಹಾನಿಯಾಗಿದೆ. ಸೋಮವಾರ ಈ ಸಂಖ್ಯೆ 1,500ನ್ನು ದಾಟಿದೆ. ಜಲಂಧರ್‌ನಲ್ಲಿ ಜಿಯೊ ಸಂಸ್ಥೆಗೆ ಸೇರಿದ ಕೇಬಲ್‌ಗಳ ಮೂಟೆಗೆ ಬೆಂಕಿ ಹಚ್ಚಲಾಗಿದೆ. ಪಂಜಾಬ್‌ನಲ್ಲಿ ಜಿಯೋ ಮೊಬೈಲ್ ಸಂಸ್ಥೆಯ 9,000ಕ್ಕೂ ಅಧಿಕ ಟವರ್‌ಗಳಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.







