ಮೈಸೂರು-ಹೈದರಾಬಾದ್ ನಡುವೆ ವಿಮಾನ ಹಾರಾಟ ಆರಂಭ

ಸಾಂದರ್ಭಿಕ ಚಿತ್ರ
ಮೈಸೂರು,ಡಿ.28: ಸಾಂಸ್ಕೃತಿನಗರಿ ಮೈಸೂರನ್ನು ಮುತ್ತಿನ ನಗರಿ ಹೈದರಾಬಾದ್ ನಡುವೆ ವಿಮಾನ ಯಾನ ಸೇವೆಯನ್ನು ಇಂಡಿಗೋ ಏರ್ ಲೈನ್ಸ್ ಆರಂಭಿಸಿದೆ.
ಮೈಸೂರಿನಿಂದ ಬೆಳಿಗ್ಗೆ 10.50 ಕ್ಕೆ(ವಿಮಾನಸಂಖ್ಯೆ 6ಇ7956)ಹಾರಾಟ ಆರಂಭಿಸಿ ಹೈದರಾಬಾದ್ ನಗರವನ್ನು ಮಧ್ಯಾಹ್ನ 12.50ಕ್ಕೆ ಮುಟ್ಟಲಿದೆ. ಹೈದರಾಬಾದ್ ನಿಂದ ಬೆಳಿಗ್ಗೆ 8.35ಕ್ಕೆ ಹೊರಡುವ (6ಇ7955) ವಿಮಾನ ಬೆಳಿಗ್ಗೆ 10.25ಕ್ಕೆ ಮೈಸೂರು ತಲುಪಲಿದೆ.
ಅಲಯನ್ಸ್ ಏರ್ ವಿಮಾನ ಮಧ್ಯಾಹ್ನ 2.35ಕ್ಕೆ ಹೈದರಾಬಾದ್ ವಿಮಾನ ನಿಲ್ದಾಣದಿಂದ ಹೊರಟು ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದೆ. ಮತ್ತೆ ರಾತ್ರಿ 8ಕ್ಕೆ ಹೊರಡುವ ಎಐ 9882 ವಿಮಾನ ರಾತ್ರಿ 10ಗಂಟೆಗೆ ಹೈದರಾಬಾದ್ ತಲುಪಲಿದೆ.
ಮೈಸೂರಿನಲ್ಲಿ ಆಂಧ್ರ ಹಾಗೂ ತೆಲಂಗಾಣದವರು ಹೆಚ್ಚು ಇದ್ದು ವಿಮಾನಕ್ಕೆ ಬೇಡಿಕೆ ಬಂದಿದೆ. ಕಚೇರಿ ಕೆಲಸ, ವಾಣಿಜ್ಯೋದ್ಯಮ ಚಟುವಟಿಕೆಗಳಿಗಾಗಿ ಎರಡೂ ನಗರಗಳ ನಡುವೆ ಹೆಚ್ಚು ಸಂಚರಿಸುವವರಿದ್ದು, ಈ ಮಾರ್ಗದಲ್ಲಿ ವಿಮಾನಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದ್ದರಿಂದಲೇ ಇಂಡಿಗೋ ಕಂಪನಿ ಮತ್ತೊಂದು ವಿಮಾನ ಸಂಚಾರ ಆರಂಭಿಸಲು ಮನಸ್ಸು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು 54 ಸೀಟುಗಳು ಭರ್ತಿ ಆಗಿ ಮೈಸೂರಿಗೆ ಬಂದಿಳಿದಿದ್ದು, ಇಲ್ಲಿಂದ 42 ಮಂದಿ ತೆರಳಲಿದ್ದಾರೆ. 3850 ರೂ.ದರವನ್ನು ನಿಗದಿಪಡಿಸಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ.







