ಉದ್ಯಮಿಯ ಪುತ್ರಿಯ ಬೆದರಿಸಿ, ವಸೂಲಿ ಪ್ರಕರಣ: ದುಷ್ಕರ್ಮಿಗಳಿಗಾಗಿ ತನಿಖೆ ಚುರುಕು
ಬೆಂಗಳೂರು, ಡಿ.28: ಉದ್ಯಮಿಯೊಬ್ಬರ ಪುತ್ರಿಯನ್ನು ಬೆದರಿಸಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿರುವ ಆರೋಪ ಸಂಬಂಧ ನೇಪಾಳಿ ಮೂಲದ ದುಷ್ಕರ್ಮಿಗಳಿಗಾಗಿ ಕೋರಮಂಗಲ ಠಾಣಾ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ.
ಕೋರಮಂಗಲದ 4ನೆ ಬ್ಲಾಕ್‍ನ ಮನೆಯಲ್ಲಿ ಉದ್ಯಮಿ ಮದನ್ ರೆಡ್ಡಿ ಅವರು ಕಳೆದ ಡಿ.26 ರಂದು ಕುಟುಂಬ ಸಮೇತ ಹೊಸೂರಿನಲ್ಲಿರುವ ತಮ್ಮ ಫಾರಂ ಹೌಸ್‍ಗೆ ಹೋಗಿದ್ದರು. ಪುತ್ರಿ ಮನೆಯಲ್ಲೇ ಉಳಿದುಕೊಂಡಿದ್ದು, ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ನೇಪಾಳ ಮೂಲದ ಮೂವರು ಮನೆ ಕೆಲಸದವರು ರವಿವಾರ ಮುಂಜಾನೆ 5ರ ವೇಳೆ ಮೊದಲ ಮಹಡಿಯಲ್ಲಿದ್ದ ಮನೆಗೆ ನುಗ್ಗಿ ಹಣ ದೋಚಲು ತಿಜೋರಿಯನ್ನು ಹೊಡೆಯತೊಡಗಿದ್ದಾರೆ ಎನ್ನಲಾಗಿದೆ.
ಶಬ್ದ ಕೇಳಿ ಮದನ್ ರೆಡ್ಡಿ ಪುತ್ರಿ ಬಂದು ನೋಡಿದಾಗ ಕಳವು ಕಂಡುಬಂದಿದ್ದು, ಆತಂಕಗೊಂಡು ಜೋರಾಗಿ ಕಿರುಚಿದ ಆಕೆಯನ್ನು ಸುತ್ತಿಗೆಯಿಂದ ಬೆದರಿಸಿ 6 ಲಕ್ಷ ರೂ. ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ದಾಖಲಾಗಿರುವ ದೂರಿನನ್ವಯ ಕೋರಮಂಗಲ ಠಾಣಾ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
Next Story





