ಪರ್ಲೋಟು ಅಬೂಬಕರ್ ಸಿದ್ದೀಕ್ ಮಸ್ಜಿದ್ ಅಧ್ಯಕ್ಷರಾಗಿ ಅಬ್ದುರ್ರಶೀದ್ ಆಯ್ಕೆ

ವಿಟ್ಲ, ಡಿ.29: ಪರ್ಲೋಟು ಅಬೂಬಕರ್ ಸಿದ್ದೀಕ್ ಮಸ್ಜಿದ್ ನ ನೂತನ ಅಧ್ಯಕ್ಷರಾಗಿ ಅಬ್ದುರ್ರಶೀದ್ ಪಿ.ಕೆ. ಆಯ್ಕೆಯಾಗಿದ್ದಾರೆ.
ಮಸೀದಿ ಗೌರವಾಧ್ಯಕ್ಷ, ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಪಿ.ಕೆ.ಆದಂ ದಾರಿಮಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಹಮೀದ್(ಅಮ್ಮಿ) ಪರ್ಲೋಟು, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಪರ್ಲೋಟು, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಪಿ.ಕೆ., ಕೋಶಾಧಿಕಾರಿಯಾಗಿ ಪಿ.ಕೆ.ಅಬ್ಬಾಸ್ ಆಯ್ಕೆಯಾದರು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಕೆ.ಬಿ.ಖಾಸಿಂ ಹಾಜಿ, ಅಬ್ದುಲ್ ಖಾದರ್ ದರ್ಬಾರ್, ಪಿ.ಕೆ.ಝುಬೈರ್, ಇಸಾಕ್ ಕೌಸರಿ, ಇಸ್ಮಾಯೀಲ್ ಕೆ.ಬಿ., ಹೈದರ್ ಬೋಳಿಯಾರ್, ಜುನೈದ್ ಪರ್ಲೋಟ್ಟು ಹಾಗೂ ಇಬ್ರಾಹೀಂ ಕೊಡಾಜೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Next Story





